ಪುಟ್ಟ ಕಂದಮ್ಮಗೆ ಅನಾರೋಗ್ಯ; ಮಗುವನ್ನು ಉಳಿಸಲು ಅಮೆರಿಕ ಪಡೆಗೆ ನೀಡಿದ ಪೋಷಕರು, ಮುಂದೇನಾಯ್ತು?
ಮಗುವಿಗೆ ಅನಾರೋಗ್ಯ ಇತ್ತು. ಹೀಗಾಗಿ ಮಗುವಿನ ಪೋಷಕರು ಚಿಕಿತ್ಸೆ ನೀಡುವಂತೆ ಯೋಧರಿಗೆ ಮಗು ನೀಡಿದ್ದರು. ಏರ್ ಪೋರ್ಟ್ ಕಾಂಪೌಂಡ್ ಮೇಲೆ ನಿಂತಿದ್ದ ಯೋಧ ಮಗುವನ್ನು ಎತ್ತಿ ಏರ್ ಪೋರ್ಟ್ ಒಳಭಾಗಕ್ಕೆ ನೀಡಿದ್ದ.

ಅಫ್ಘಾನಿಸ್ತಾನ್: ಅಫ್ಘಾನಿಸ್ತಾನದಲ್ಲಿ(Afghanistan) ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ತಾಲಿಬಾನಿಗರ ಅಟ್ಟಹಾಸದ ನಡುವೆಯೂ ಏರ್ಲಿಫ್ಟ್ ಮಾಡಲಾಗ್ತಿದೆ. ಆಗಸ್ಟ್ 19 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ(Kabul Airport) ಅಮೆರಿಕಾ ಪಡೆಗಳು ರಕ್ಷಣಾ ಕಾರ್ಯ ನಡೆಸುವಾಗ ಪೋಷಕರೊಬ್ಬರು ಅಮೆರಿಕಾ ಪಡೆಗಳ ಕೈಗೆ ಮಗು ನೀಡಿದ್ದಾರೆ. ಆದರೆ ಮಗುವನ್ನು ಆಮೆರಿಕಾಕ್ಕೆ ಏರ್ ಲಿಫ್ಟ್ ಮಾಡಿಲ್ಲ.
ಮಗುವಿಗೆ ಅನಾರೋಗ್ಯ ಇತ್ತು. ಹೀಗಾಗಿ ಮಗುವಿನ ಪೋಷಕರು ಚಿಕಿತ್ಸೆ ನೀಡುವಂತೆ ಯೋಧರಿಗೆ ಮಗು ನೀಡಿದ್ದರು. ಏರ್ ಪೋರ್ಟ್ ಕಾಂಪೌಂಡ್ ಮೇಲೆ ನಿಂತಿದ್ದ ಯೋಧ ಮಗುವನ್ನು ಎತ್ತಿ ಏರ್ ಪೋರ್ಟ್ ಒಳಭಾಗಕ್ಕೆ ನೀಡಿದ್ದ. ಬಳಿಕ ಮಗುವಿಗೆ ಚಿಕಿತ್ಸೆ ನೀಡಿ, ವಾಪಸ್ ಪೋಷಕರಿಗೆ ಮಗು ನೀಡಲಾಗಿದೆ. ಈಗ ಆ ಮಗು, ಪೋಷಕರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಅಮೆರಿಕಾ ತಿಳಿಸಿದೆ.
ವಿಮಾನ ನಿಲ್ದಾಣದ ಒಳಭಾಗದಲ್ಲಿ ನಾರ್ವೆ ಆಸ್ಪತ್ರೆ ಇದೆ. ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಿ, ತಂದೆಗೆ ಮಗುವನ್ನು ವಾಪಸ್ ನೀಡಲಾಗಿದೆ ಎಂದು ಅಮೆರಿಕಾದ ರಕ್ಷಣಾ ಇಲಾಖೆ ಪೆಂಟಾಗನ್ ವಕ್ತಾರ ಜಾನ್ ಕೆರಬಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಈಗ ಮಗು ತನ್ನ ಪೋಷಕರ ವಶದಲ್ಲೇ ಇದೆ. ಮಾನವೀಯತೆಯ ದೃಷ್ಟಿಯಿಂದ ಅಮೆರಿಕಾ ಯೋಧರು ಚಿಕಿತ್ಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ: ಅಫ್ಘಾನಿಸ್ತಾನದ ವಿವಿಧ ಸ್ಥಳಗಳಿಂದ 500ಕ್ಕೂ ಹೆಚ್ಚು ಮಂದಿ ಸ್ಥಳಾಂತರ; ಭಾರತಕ್ಕೆ ಏರ್ಲಿಫ್ಟ್




