Mysuru News: ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಪುರಾತನ ದೇವಸ್ಥಾನದ ಕುರುಹುಗಳು ಪತ್ತೆ
ಕಬಿನಿ ಜಲಾಶಯದ ನೀರು ತಳ ಸೇರುತ್ತಿದ್ದಂತೆ ಹೆಚ್.ಡಿ ತಾಲೂಕಿನ ಕೀರ್ತಿಪುರಗ್ರಾಮ ವ್ಯಾಪ್ತಿಯ ಹಿನ್ನಿರಿನಲ್ಲಿ ಪುರಾತನ ಭವಾನಿ ಶಂಕರ್ ದೇವಸ್ಥಾನದ ಕುರುಹುಗಳು ಪತ್ತೆಯಾಗಿವೆ.
ಮೈಸೂರು: ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಕಬಿನಿ ಜಲಾಶಯದ ನೀರು ತಳ ಸೇರಿದೆ. ಜಲಾಶಯದ ನೀರು ತಳ ಸೇರುತ್ತಿದ್ದಂತೆ ಮುಳಗಡೆಯಾಗಿದ್ದ ಪುರಾತನ ದೇವಸ್ಥಾನ ಗೋಚರವಾಗಿದೆ. ಹೆಚ್.ಡಿ ತಾಲೂಕಿನ ಕೀರ್ತಿಪುರಗ್ರಾಮ ವ್ಯಾಪ್ತಿಯ ಹಿನ್ನಿರಿನಲ್ಲಿ ಪುರಾತನ ಭವಾನಿ ಶಂಕರ್ ದೇವಸ್ಥಾನದ ಕುರುಹುಗಳು ಪತ್ತೆಯಾಗಿವೆ. ದೇವಾಲಯದ ಇಟ್ಟಿಗೆ ಚೂರುಗಳು, ದೇವರ ವಿಗ್ರಹ, ಶಿವ ಲಿಂಗ, ಗಣೇಶ ಮೂರ್ತಿ ಸೇರಿದಂತೆ ದೇವಸ್ಥಾನದ ಪಳಯುಳಿಕೆಗಳು ಪತ್ತೆಯಾಗಿವೆ. 2013 ರಲ್ಲಿ ಈ ದೇವಸ್ಥಾನ ಇದೇ ರೀತಿ ಗೋಚರವಾಗಿತ್ತು. ಈಗ ಮತ್ತೆ ಹತ್ತು ವರ್ಷಗಳ ನಂತರ ಕಾಣಿಸಿಕೊಂಡಿದೆ. 84 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಕೇವಲ 50 ಅಡಿ ಮಾತ್ರ ನೀರಿದೆ.