AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾನಿ ಮದುವೆಗೆ ಪವರ್​ಫುಲ್ ಎಂಟ್ರಿ ಕೊಟ್ಟ ಪವನ್ ಕಲ್ಯಾಣ್

ಅಂಬಾನಿ ಮದುವೆಗೆ ಪವರ್​ಫುಲ್ ಎಂಟ್ರಿ ಕೊಟ್ಟ ಪವನ್ ಕಲ್ಯಾಣ್

ಮಂಜುನಾಥ ಸಿ.
|

Updated on: Jul 13, 2024 | 11:09 PM

Share

ಮುಕೇಶ್ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅನ್ನು ವಿವಾಹವಾಗುತ್ತಿದ್ದು ದೇಶ ವಿದೇಶದ ಹಲವು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಹ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಮುಕೇಶ್ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅನ್ನು ವಿವಾಹವಾಗುತ್ತಿದ್ದು ಭಾರಿ ಅದ್ಧೂರಿಯಾಗಿ ಮದುವೆ ಸಮಾರಂಭ ಮುಂಬೈನ ಜಿಯೋ ವರ್ಲ್ಡ್ ಆರ್ಟ್ ಸೆಂಟರ್​ನಲ್ಲಿ ನಡೆಯುತ್ತಿದೆ. ದೇಶ ವಿದೇಶದ ಹಲವಾರು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಭಾರತದ ಅತ್ಯಂತ ದುಬಾರಿ ಮದುವೆ ಇದೆನ್ನಲಾಗುತ್ತಿದ್ದು, ಈ ಹಿಂದೆ ನಡೆದಿದ್ದ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ ದೇಶ-ವಿದೇಶದ ಹಲವು ಸಿನಿಮಾ ತಾರೆಯರು ಭಾಗಿಯಾಗಿದ್ದರು. ಈಗ ಮದುವೆಗೆ ದೇಶ, ವಿದೇಶದ ರಾಜಕಾರಣಿಗಳನ್ನು ಸಹ ಅಂಬಾನಿ ಆಹ್ವಾನಿಸಿದ್ದಾರೆ. ತೆಲುಗಿನ ಸೂಪರ್ ಸ್ಟಾರ್, ಇತ್ತೀಚೆಗೆ ಚುನಾವಣೆ ಗೆದ್ದು ಆಂಧ್ರದ ಡಿಸಿಎಂ ಸಹ ಆಗಿರುವ ಪವನ್ ಕಲ್ಯಾಣ್ ಸಹ ಅಂಬಾನಿ ಮದುವೆಗೆ ಆಗಮಿಸಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಧರಿಸಿರುವ ಉಡುಪು ಗಮನ ಸೆಳೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More