Gruha Jyoti Scheme: ಸುಳ್ಳು ಹೇಳಿ ಗೆದ್ದ ಸಿದ್ದರಾಮಯ್ಯ ಕೈಗೆ ಸಿಗ್ಲಿ ಮಾಡ್ತೀನಿ ಅಂತ ರೋಷ ಹೊರಹಾಕಿದರು ಮಂಡ್ಯ ಕಿಲಾರಾದ ಮಹಿಳೆ!
ಸಿದ್ದರಾಮಯ್ಯ 10 ಕೆಜಿ ಕೊಡ್ತೀನಿ ಅಂತ ವೋಟು ಹಾಕಿಸ್ಕೊಂಡ್ ಗೆದ್ದುಬಿಟ್ಟು ಈಗ ಇಲ್ಲ ಅಂತಾವ್ರೆ, ಬರ್ಲಿ ಇನ್ನೊಂದ್ಸಲ ಇಲ್ಲಿಗೆ; ಪಾಠ ಕಲಿಸ್ತೀನಿ ಅಂತ ನಿರ್ಮಲಮ್ಮ ಹೇಳುತ್ತಾರೆ.
ಮಂಡ್ಯ: ಜಿಲ್ಲೆಯ ಕೀಲಾರಾ ಗ್ರಾಮದ ಈ ಮಹಿಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕೆಂಡಕಾರುತ್ತಿದ್ದಾರೆ. ಅವರು ಕೈಗೆ ಸಿಗಲಿ ತದುಕ್ತೀನಿ ಅನ್ನೋವಷ್ಟು ರೋಷ ಅವರಲ್ಲಿ ಮಡುಗಟ್ಟಿದೆ. ಅಂದಹಾಗೆ ಮಹಿಳೆಯ ಹೆಸರು ನಿರ್ಮಲ ಮತ್ತು ಅವರು ಪ್ರಮುಖ ದೂರೇನೆಂದರೆ, ಅವರ ಮನೆಯ ವಿದ್ಯುತ್ ಬಿಲ್ (electricity bill) ರೂ. 350 ಬಂದಿದ್ದರೆ ಇಲ್ಲಿನ ಮೆಸ್ಕಾಂ ಸಬ್ ಡಿವಿಜನ್ ಕಚೇರಿಯವರು ರೂ. 700 ಕಟ್ಟಲು ಹೇಳಿದ್ದಾರಂತೆ. ಹಾಗಾಗೇ ಅವರ ಪಿತ್ತ ನೆತ್ತಿಗೇರಿದೆ. ಅಕ್ಕಿ ವಿಚಾರದಲ್ಲೂ ಅವರು ಸರ್ಕಾರವನ್ನು ಉಗಿಯುತ್ತಿದ್ದಾರೆ. ಕೇಂದ್ರ ಸರ್ಕಾರ 5 ಕೆಜಿ ಈಗಾಗಲೇ ಕೊಡುತ್ತಿದೆ, ಸಿದ್ದರಾಮಯ್ಯ 10 ಕೆಜಿ ಕೊಡ್ತೀನಿ ಅಂತ ವೋಟು ಹಾಕಿಸ್ಕೊಂಡ್ ಗೆದ್ದುಬಿಟ್ಟು ಈಗ ಇಲ್ಲ ಅಂತಾವ್ರೆ, ಬರ್ಲಿ ಇನ್ನೊಂದ್ಸಲ ಇಲ್ಲಿಗೆ; ಪಾಠ ಕಲಿಸ್ತೀನಿ ಅಂತ ನಿರ್ಮಲಮ್ಮ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ