AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಬಸ್ ನಿಲ್ದಾಣ ಆವರಣದಲ್ಲಿ ಮೂತ್ರ ವಿಸರ್ಜನೆ.. ಸಾರ್ವಜನಿಕರಿಗೆ ದಂಡದ ಬಿಸಿ ಮುಟ್ಟಿಸಿದ ಸಿಬ್ಬಂದಿ

ಧಾರವಾಡ ಬಸ್ ನಿಲ್ದಾಣ ಆವರಣದಲ್ಲಿ ಮೂತ್ರ ವಿಸರ್ಜನೆ.. ಸಾರ್ವಜನಿಕರಿಗೆ ದಂಡದ ಬಿಸಿ ಮುಟ್ಟಿಸಿದ ಸಿಬ್ಬಂದಿ

ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Jul 04, 2023 | 5:29 PM

Share

ಧಾರವಾಡ: ಬಯಲಿನಲ್ಲಿ ಮೂತ್ರ ವಿಸರ್ಜನೆ ವಿಚಾರ ಸಾರ್ವಜನಿಕರೊಬ್ಬರು ಮತ್ತು ಕೆಎಸ್ಆರ್‌ಟಿಸಿ ಸಿಬ್ಬಂದಿ ಮಧ್ಯೆ ಕಿರಿಕ್ ಆಗಿದೆ. ಬಯಲು ಶೌಚ ಮಾಡಿದವರಿಗೆ ದಂಡ ವಿಧಿಸುವ ವ್ಯವಸ್ಥೆಯಿದ್ದು, ದಂಡ ಕೊಡಲು ಜನ ನಿರಾಕರಿಸಿದ್ದಾರೆ.

ಧಾರವಾಡ: ಬಯಲಿನಲ್ಲಿ ಮೂತ್ರ ವಿಸರ್ಜನೆ ವಿಚಾರ ಸಾರ್ವಜನಿಕರೊಬ್ಬರು ಮತ್ತು ಕೆಎಸ್ಆರ್‌ಟಿಸಿ ಸಿಬ್ಬಂದಿ ಮಧ್ಯೆ ಕಿರಿಕ್ ಆಗಿದೆ. ಬಯಲು ಶೌಚ ಮಾಡಿದವರಿಗೆ ದಂಡ ವಿಧಿಸುವ ವ್ಯವಸ್ಥೆಯಿದ್ದು, ದಂಡ ಕೊಡಲು ಜನ ನಿರಾಕರಿಸಿದ್ದಾರೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಇಂದು ಮಂಗಳವಾರ ಈ ಘಟನೆ ನಡೆದಿದೆ. ಜನರಿಗೆ ದಂಡ ಹಾಕುತ್ತಿದ್ದ ಸಿಬ್ಬಂದಿ ಜೊತೆ ದಂಡದ ವಿಚಾರವಾಗಿ ಕಿತ್ತಾಟ ನಡೆದಿದೆ. ಪರಸ್ಪರರು ಕೈ ಕೈ ಸಹ ಮಿಲಾಯಿಸಿದ್ದಾರೆ.

ಮಹಿಳೆಯೊಬ್ಬರು ದಂಡದ ಹಣ ಕೊಡಲಿಲ್ಲವೆಂದು ಆ ಮಹಿಳೆಯ ಜೊತೆಗೂ ಸಿಬ್ಬಂದಿ ಕಿರಿಕ್ ಮಾಡಿದ್ದಾರೆ. ಈ ಕಿತ್ತಾಟದ ವಿಡಿಯೋ ವೈರಲ್ ಆಗಿದೆ. ನಿಲ್ದಾಣದಲ್ಲಿ ಸುಲಭ ಶೌಚಾಲಯದ ವ್ಯವಸ್ಥೆ ಇದ್ದರೂ ನಿಲ್ದಾಣದ ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಹೀಗೆ ಮೂತ್ರ ವಿಸರ್ಜನೆ ಮಾಡಿದವರಿಗೆ ಸಿಬ್ಬಂದಿ ದಂಡ ಹಾಕಿ, ಬಿಸಿ ಮುಟ್ಟಿಸುತ್ತಿದ್ದಾರೆ. ಈ ವೇಳೆ ದಂಡ ಕೊಡಲು ಕೆಲವರು ಹಿಂದೇಟು ಹಾಕಿದ್ದಾರೆ. ಈ ಹಂತದಲ್ಲಿ ಒಬ್ಬ ಯುವಕನ ಜೊತೆಯೂ ಸಿಬ್ಬಂದಿ ಕೈ ಕೈ ಮಿಲಾಯಿಸಿದ್ದಾರೆ.

 

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು