Video: ಇನೋವಾ ಕಾರಿನಲ್ಲಿ ಬಂದು 7 ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್!
ಒಡಿಶಾದ ಅಂಗುಲ್ ಜಿಲ್ಲೆಯ ಪ್ರಸಿದ್ಧ 'ಬಯಾನಿಕಾ' ಸೀರೆ ಶೋರೂಂನಲ್ಲಿ ಅಚ್ಚರಿಯ ಘಟನೆ ನಡೆದಿದೆ. ಗ್ರಾಹಕರಂತೆ ಐಷಾರಾಮಿ ಕಾರಿನಲ್ಲಿ ಬಂದ ಆರು ಮಹಿಳೆಯರ ತಂಡವು, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ 25 ದುಬಾರಿ ರೇಷ್ಮೆ ಸೀರೆಗಳನ್ನು ಕಳವು ಮಾಡಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯದಲ್ಲಿ, ಮಹಿಳೆಯರು ಚಾಣಾಕ್ಷತನದಿಂದ ಸೀರೆಗಳನ್ನು ತಮ್ಮ ಉಡುಪಿನಲ್ಲಿ ಅಡಗಿಸಿ ಪರಾರಿಯಾಗಿದ್ದಾರೆ.
ಒಡಿಶಾ: ಅನುಗುಲ್ ಜಿಲ್ಲೆಯ ಪ್ರಸಿದ್ಧ ‘ಬಯಾನಿಕಾ’ ಸೀರೆ ಶೋರೂಮ್‌ಗೆ ಗ್ರಾಹಕರಂತೆ ಐಷಾರಾಮಿ ಟೊಯೋಟಾ ಇನೋವಾ ಕಾರಿನಲ್ಲಿ ಬಂದ ಆರು ಮಹಿಳೆಯರ ತಂಡವೊಂದು, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಸುಮಾರು 25 ದುಬಾರಿ ಬೆಲೆಯ ಸಿಲ್ಕ್ ಸೀರೆಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯದಂತೆ, ಈ ಮಹಿಳೆಯರು ಅತ್ಯಂತ ಚಾಣಾಕ್ಷತನದಿಂದ ಸೀರೆಗಳನ್ನು ತಮ್ಮ ಉಡುಪಿನೊಳಗೆ ಅಡಗಿಸಿಟ್ಟುಕೊಂಡು ಸಲೀಸಾಗಿ ಪರಾರಿಯಾಗಿದ್ದು, ಕಳುವಾದ ಸೀರೆಗಳ ಒಟ್ಟು ಮೌಲ್ಯ ಸುಮಾರು 7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋಯ್ತು ತ್ರಿಶೂಲಿ ನದಿ ಸೇತುವೆ
ಏಕಾಏಕಿ ಹೊತ್ತಿ ಉರಿದ ಕಾರು: ಕನ್ಯೆ ನೋಡಲು ಹೋಗಿದ್ದವ ಪ್ರಾಣಾಪಾಯದಿಂದ ಪಾರು
6 ಬಾರಿ ಅಂಬಾರಿ ಹೊತ್ತು ನಿವೃತ್ತಿಯಾದ ಅಭಿಮನ್ಯುಗೆ ಮತ್ತೊಂದು ಹೊಣೆಗಾರಿಕೆ?
ಸಿಎಂ ಡಿಕೆ ಶಿವಕುಮಾರ್ ದಿಢೀರ್ ಸುದ್ದಿಗೋಷ್ಠಿಯ ನೇರಪ್ರಸಾರ

