ಸಂಸ್ಕೃತದಲ್ಲೇ ವಿಶ್ವ ಸಂಸ್ಕೃತ ದಿನದ ಶುಭಾಶಯ ಕೋರಿದ ಅನಿಲ್ ಕುಂಬ್ಳೆ ದಂಪತಿಗಳು; ವಿಡಿಯೋ ನೋಡಿ

Updated on: Aug 09, 2025 | 9:00 PM

Anil Kumble, Chetanna Kumble Wish World Sanskrit Day: ವಿಶ್ವ ಸಂಸ್ಕೃತ ದಿನಾಚರಣೆಯಂದು, ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಮತ್ತು ಅವರ ಪತ್ನಿ ಚೇತನಾ ಕುಂಬ್ಳೆ ಅವರು ಸಂಸ್ಕೃತದಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ಸಂಸ್ಕೃತ ಭಾಷೆಯ ಮಹತ್ವ ಮತ್ತು ಅದರ ಸಂರಕ್ಷಣೆಯ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಸಂಸ್ಕೃತವನ್ನು ಉಳಿಸಿ ಬೆಳೆಸುವಂತೆ ಅವರು ಎಲ್ಲರನ್ನು ಕೋರಿದ್ದಾರೆ. ವೇದಗಳು, ಆಚರಣೆಗಳು, ಕಲೆಗಳಲ್ಲಿ ಸಂಸ್ಕೃತದ ಪಾತ್ರವನ್ನು ಅವರು ಎತ್ತಿ ತೋರಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಅವರ ಪತ್ನಿ ಚೇತನಾ ಕುಂಬ್ಳೆ ಅವರು ಸಂಸ್ಕೃತದಲ್ಲಿ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ವಿಶ್ವ ಸಂಸ್ಕೃತ ದಿನಕ್ಕೆ ಶುಭಾಶಯ ಕೋರಿದಿದ್ದಾರೆ. ಈ ವರ್ಷ ಆಗಸ್ಟ್ 9 ರಂದು ವಿಶ್ವ ಸಂಸ್ಕೃತ ದಿನವನ್ನು ಆಚರಿಸುತ್ತಿದ್ದು, ಕುಂಬ್ಳೆ ದಂಪತಿಗಳು ತಮ್ಮ ವಿಡಿಯೋ ಸಂದೇಶದಲ್ಲಿ ಸಂಸ್ಕೃತವನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಮಹತ್ವವನ್ನು ಎತ್ತಿ ತೋರಿಸಿದರು. ಸಂಸ್ಕೃತವನ್ನು ಭಾರತದ ಸಾಂಸ್ಕೃತಿಕ ಪರಂಪರೆಯ ಅಕಾಲಿಕ ನಿಧಿ ಎಂದಿರುವ ದಂಪತಿಗಳು ಈ ಭಾಷೆ ದೈನಂದಿನ ಬಳಕೆಯಲ್ಲಿಲ್ಲದಿದ್ದರೂ, ವೇದ ಪಠಣಗಳು, ಆಚರಣೆಗಳು, ಶಾಸ್ತ್ರೀಯ ಕಲೆಗಳು ಮತ್ತು ಶೈಕ್ಷಣಿಕ ಸಂಶೋಧನೆಗಳ ಮೂಲಕ ಅದು ಅಭಿವೃದ್ಧಿ ಹೊಂದುತ್ತಲೇ ಇದೆ ಎಂದರು. ಹಾಗೆಯೇ ಸಂಸ್ಕೃತ ಭಾಷೆಯನ್ನು ಓದಲು, ಕಲಿಯಲು ಮತ್ತು ಅಧ್ಯಯನ ಮಾಡಲು ಎಲ್ಲರನ್ನೂ ಒತ್ತಾಯಿಸಿದರು.

ಭಾರತ ಸರ್ಕಾರ ಮತ್ತು ಸಂಸ್ಕೃತ ಸಂಸ್ಥೆಗಳ ಜಂಟಿ ಪ್ರಯತ್ನದ ಮೂಲಕ ವಿಶ್ವ ಸಂಸ್ಕೃತ ದಿನವನ್ನು ಮೊದಲು 1969 ರಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವು ಸಂಸ್ಕೃತ ಕಲಿಕೆಯನ್ನು ಪ್ರೋತ್ಸಾಹಿಸುವುದು, ಅದರ ಬೌದ್ಧಿಕ ಆಳವನ್ನು ಪ್ರದರ್ಶಿಸುವುದು ಮತ್ತು ಭಾಷೆಯ ಶ್ರೀಮಂತ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಯುವ ಪೀಳಿಗೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

Published on: Aug 09, 2025 08:59 PM