AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಭಾರೀ ಮಳೆಯಂದ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ 8 ಜನರು ಸಾವು

ದೆಹಲಿಯಲ್ಲಿ ಭಾರೀ ಮಳೆಯಂದ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ 8 ಜನರು ಸಾವು

ಸುಷ್ಮಾ ಚಕ್ರೆ
|

Updated on: Aug 09, 2025 | 9:36 PM

Share

ದೆಹಲಿಯ ಹರಿನಗರದಲ್ಲಿ ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಕುಸಿದು 8 ಜನರು ಸಾವನ್ನಪ್ಪಿದ್ದಾರೆ. ಇಂದು ಸುರಿದ ಭಾರೀ ಮಳೆಯ ನಡುವೆ ದೆಹಲಿಯಲ್ಲಿ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಮಕ್ಕಳು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಆಗ್ನೇಯ ದೆಹಲಿಯ ಜೈತ್‌ಪುರ ಪ್ರದೇಶದಲ್ಲಿರುವ ಹರಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಹಠಾತ್ತನೆ ಕುಸಿದ ನಂತರ ಅದರಡಿ ಶೀಟ್​ನ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ಹೆಚ್ಚಾಗಿ ಸ್ಕ್ರ್ಯಾಪ್ ಮಾರಾಟಗಾರರು ಸಿಕ್ಕಿಬಿದ್ದರು. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್‌ಗೆ ಕರೆದೊಯ್ಯಲಾಯಿತು. ಆದರ ಅವರೆಲ್ಲರೂ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

ನವದೆಹಲಿ, ಆಗಸ್ಟ್ 9: ದೆಹಲಿಯ (Delhi Rains) ಹರಿನಗರದಲ್ಲಿ ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಕುಸಿದು 8 ಜನರು ಸಾವನ್ನಪ್ಪಿದ್ದಾರೆ. ಇಂದು ಸುರಿದ ಭಾರೀ ಮಳೆಯ ನಡುವೆ ದೆಹಲಿಯಲ್ಲಿ ಗೋಡೆಯ ಒಂದು ಭಾಗ ಕುಸಿದು ಇಬ್ಬರು ಮಕ್ಕಳು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಆಗ್ನೇಯ ದೆಹಲಿಯ ಜೈತ್‌ಪುರ ಪ್ರದೇಶದಲ್ಲಿರುವ ಹರಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ಹಳೆಯ ದೇವಾಲಯವೊಂದರ ಪಕ್ಕದಲ್ಲಿರುವ ಗೋಡೆ ಹಠಾತ್ತನೆ ಕುಸಿದ ನಂತರ ಅದರಡಿ ಶೀಟ್​ನ ಮನೆಗಳಲ್ಲಿ ವಾಸಿಸುತ್ತಿದ್ದ ಜನರು ಹೆಚ್ಚಾಗಿ ಸ್ಕ್ರ್ಯಾಪ್ ಮಾರಾಟಗಾರರು ಸಿಕ್ಕಿಬಿದ್ದರು. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆ ಮತ್ತು ಏಮ್ಸ್‌ಗೆ ಕರೆದೊಯ್ಯಲಾಯಿತು. ಆದರ ಅವರೆಲ್ಲರೂ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ