Love, Marriage and Dhoka: ಪ್ರಿಯಕರನಿಗಾಗಿ ಗಂಡನನ್ನು ತೊರೆದು ಬಂದ ಕೋಲಾರದ ಯುವತಿಗೆ ಈಗ ತ್ರಿಶಂಕು ಸ್ಥಿತಿ!
ಆದರೆ ಕಿರಣ್ ಮಾತ್ರ ತನ್ನ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎನ್ನುತ್ತಿದ್ದಾನೆ. ಯುವತಿ ಕಿರಣ್ ಮನೆ ಮುಂದೆ ಒಂಟಿಯಾಗಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾಳೆ.
ಕೋಲಾರ: ತ್ರಿಶಂಕು ಸ್ಥಿತಿ ಅಂದರೆ ಇದೆ ಮಾರಾಯ್ರೇ. ಈ ಯುವತಿಯ ಸಂಕಟ ಕಂಡು ಕನಿಕರ ಹುಟ್ಟೋದು ನಿಜವಾದರೂ ತನ್ನ ಈ ಸ್ಥಿತಿಗೆ ಖುದ್ದು ಅವಳೇ ಕಾರಣ ಅನ್ನೋದನ್ನು ಮರೆಯಬಾರದು. ಜಿಲ್ಲೆಯ ಮಾಲೂರು (Malur) ತಾಲ್ಲೂಕಿನ ದೊಡ್ಡಮಲ್ಲೆ ಗ್ರಾಮದ ಯುವತಿ ಮತ್ತು ಅದೇ ಗ್ರಾಮದ ಕಿರಣ್ (Kiran) ಹೆಸರಿನ ಯುವಕನ ಪರಸ್ಪರ ಪ್ರೀತಿಸುತ್ತಿದ್ದರು. ಅದರೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆಯಾಯಿತು. ಆದರೆ ಯುವತಿಗೆ ಮೊದಲ ಪ್ರೀತಿ ಮರೆಯಲಾಗಲಿಲ್ಲ. ಕಿರಣ್ ಗೆ ಅದನ್ನು ಹೇಳಿಕೊಂಡಾಗ ಅವನು ಗಂಡನಿಗೆ ಡಿವೋರ್ಸ್ (Divorce) ನೀಡಿ ಬಂದರೆ ಮದುವೆಯಾಗುತ್ತೇನೆ ಅಂದಿದ್ದಾನೆ. ಅವನನ್ನು ನಂಬಿ ಯುವತಿ ತಾಳಿಕಟ್ಟಿದ ಗಂಡನಿಗೆ ವಿಚ್ಛೇದನ ನೀಡಿ ವಾಪಸ್ಸು ಬಂದಿದ್ದಾಳೆ. ಆದರೆ ಕಿರಣ್ ಮಾತ್ರ ತನ್ನ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎನ್ನುತ್ತಿದ್ದಾನೆ. ಯುವತಿ ಕಿರಣ್ ಮನೆ ಮುಂದೆ ಒಂಟಿಯಾಗಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾಳೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ