ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮೊದಲು ಭಾರತೀಯ ವಾಯುಸೇನೆ ವಿಮಾನದ ಪ್ರಯೋಗಾರ್ಥ ಹಾರಾಟ ಮತ್ತು ಲ್ಯಾಂಡಿಂಗ್

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮೊದಲು ಭಾರತೀಯ ವಾಯುಸೇನೆ ವಿಮಾನದ ಪ್ರಯೋಗಾರ್ಥ ಹಾರಾಟ ಮತ್ತು ಲ್ಯಾಂಡಿಂಗ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 21, 2023 | 4:29 PM

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ವಾಯುಸೇನೆಯ ಪೈಲಟ್ ಗಳು ರನ್ ವೇ ಮತ್ತು ಲ್ಯಾಂಡಿಂಗ್ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ

ಶಿವಮೊಗ್ಗ: ಬರುವ ಸೋಮವಾರ ಶಿವಮೊಗ್ಗ ವಿಮಾನ ನಿಲ್ದಾಣದ (Shivamogga airport) ಲೋಕಾರ್ಪಣೆಯಾಗಲಿದೆ. ಕಮರ್ಶಿಯಲ್ ಫ್ಲೈಟ್ ಗಳ (commercial flights) ಹಾರಾಟ ಆರಂಭಗೊಳ್ಳುವ ಮೊದಲು ಬಾರತೀಯ ವಾಯುಸೇನೆಯ ವಿಮಾನವೊಂದು ಪ್ರಾಯೋಗಿಕ ಹಂತದ ಹಾರಾಟ, ಲ್ಯಾಂಡಿಂಗ್ (landing) ಮತ್ತು ಟೇಕಾಫ್ ಗಳನ್ನು ಇಂದು ನಡೆಸಿತು. ವಿಮಾನ ನಿಲ್ದಾಣದ ಬಳಿಗೆ ಹಾರಿ ಬರುವ ವಾಯುಸೇನೆಯ ವಿಮಾನವು ನಿಧಾನಕ್ಕೆ ಲ್ಯಾಂಡ್ ಆಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸೇನೆಯ ಪೈಲಟ್ ಗಳು ರನ್ ವೇ ಮತ್ತು ಲ್ಯಾಂಡಿಂಗ್ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ