ರೋಷನ್ ಜೊತೆ ಡೇಟಿಂಗ್​ನಲ್ಲಿದ್ದಿದ್ದನ್ನು ಅನುಶ್ರೀ ನನಗೆ ಹೇಳಿದ್ದರು: ಚೈತ್ರಾ ಆಚಾರ್, ಚಿತ್ರ ನಟಿ

Updated on: Aug 28, 2025 | 1:52 PM

ಗೆಳತಿಯ ಮದುವೆಯಾಯಿತು ನಿಮ್ಮದು ಯಾವಾಗ ಅಂದ್ರೆ ಬ್ಲಶ್ ಆದ ಚೈತ್ರಾ ಅವರು, ನಾನಿನ್ನೂ ಚಿಕ್ಕ ಹುಡುಗಿ, ಬಹಳಷ್ಟು ಸಾಧನೆ ಮಾಡಬೇಕಿದೆ, ಅನುಶ್ರೀ ಅವರು ಅಪಾರವಾದ ಸಾಧನೆ ಮಾಡಿ ಮದುವೆಯಾಗಿದ್ದಾರೆ ನಾನೂ ಮದುವೆಯ ಬಗ್ಗೆ ಯೋಚನೆ ಮಾಡುವ ಮೊದಲು ಸಾಕಷ್ಟು ಸಾಧನೆ ಮಾಡಬೇಕು, ಸದ್ಯಕ್ಕಂತೂ ಅದರ ಬಗ್ಗೆ ಯೋಚೆನೆ ಇಲ್ಲ ಎಂದು ಹೇಳುತ್ತಾರೆ.

ಬೆಂಗಳೂರು, ಆಗಸ್ಟ್ 28: ಕನ್ನಡದ ಜನಪ್ರಿಯ ಆ್ಯಂಕರ್​ಗಳಲ್ಲಿ ಒಬ್ಬರೆನಿಸಿಕೊಂಡಿರುವ ಅನುಶ್ರೀ ತಾನು ಮೆಚ್ಚಿ ಪ್ರೀತಿಸಿದ ಯುವಕ ರೋಷನ್​ರನ್ನು ಮದುವೆಯಾಗಿದ್ದಾರೆ. ಚಿತ್ರರಂಗದ ಮತ್ತು ಬೇರೆ ಬೇರೆ ಕ್ಷೇತ್ರಗಳ ಅನೇಕ ಗಣ್ಯರ ಸಮ್ಮುಖದಲ್ಲಿ ಅವರು ರೋಷನ್​ರೊಂದಿಗೆ ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾದರು. ಮಾಧ್ಯಮಗಳೊಂದಿಗೆ ಮಾತಾಡಿದ ಅನುಶ್ರೀಯವರ ಗೆಳತಿ ಮತ್ತು ಚಿತ್ರನಟಿ ಚೈತ್ರಾ ಆಚಾರ್ (Chaitra Achar) ಬಹಳ ಖುಷಿಯಲ್ಲಿದ್ದರು. ಇನ್ ಫ್ಯಾಕ್ಟ್, ಅನುಶ್ರೀಯವರು ತಮ್ಮ ಮತ್ತು ರೋಷನ್ ಲವ್ ಕಹಾನಿಯನ್ನು ಚೈತ್ರಾ ಮುಂದೆ ಹೇಳಿಕೊಂಡಿದ್ದರಂತೆ. ಮದುವೆಯ ಬಗ್ಗೆ ಅನುಶ್ರೀ ತುಂಬಾ ಉತ್ಸಾಹದಲ್ಲಿದ್ದರು, ರೋಷನ್ ಜೊತೆ ಡೇಟಿಂಗ್ ವಿಷಯ ನನ್ನೊಂದಿಗೆ ಹಂಚಿಕೊಂಡಿದ್ದರು, ಅವರ ಮದುವೆ ತುಂಬಾ ಸಂತಸ ನೀಡಿದೆ ಎಂದು ಚೈತ್ರಾ ಹೇಳಿದರು.

ಇದನ್ನೂ ಓದಿ:     ಅನುಶ್ರೀ ಮದುವೆಗೆ ಆಗಮಿಸಿ ಹರಸಿದ ಶಿವಣ್ಣ-ಗೀತಕ್ಕ: ವಿಡಿಯೋ ನೋಡಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ