ವ್ಯಾಕರಣಬದ್ಧವಾಗಿ ಕನ್ನಡ ಮಾತಾಡುತ್ತಿದ್ದ ಅಪರ್ಣಾ ನನಗಾಗಿ ಹಲವಾರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು: ಇಂದ್ರಜಿತ್ ಲಂಕೇಶ್

|

Updated on: Jul 12, 2024 | 4:07 PM

ಇತ್ತೀಚಿಗೆ ಅವರು ಲಂಕೇಶ್ ಪತ್ರಿಕೆಗಾಗಿ ಒಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಮತ್ತು ಅದರಲ್ಲಿ ನಾಡಿನ ಖ್ಯಾತ ಸಾಹಿತಿ ಮತ್ತು ಸೆಲಿಬ್ರಿಟಿಗಳು ಭಾಗಿಯಾಗಿದ್ದರಿಂದ ಅದು ಬಹಳ ದೊಡ್ಡ ಕಾರ್ಯಕ್ರಮವಾಗಿತ್ತು, ಅಪರ್ಣಾ ಅದನ್ನು ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದರು ಎಂದು ಇಂದ್ರಜಿತ್ ಲಂಕೇಶ್ ಹೇಳಿದರು. ಅವರು ಈಗ ಅವರು ನಮ್ಮ ಜೊತೆ ಇಲ್ಲವಲ್ಲ ಎಂಬ ಭಾವನೆ ದುಃಖಕ್ಕೀಡು ಮಾಡುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕ ಇಂದ್ರಜಿತ್ ಲಂಕೇಶ್ ಅವರು ಅಗಲಿದ ನಿರೂಪಕಿ, ನಟಿ ಮತ್ತು ವಾರ್ತಾ ವಾಚಕಿ ಅಪರ್ಣಾ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ಖ್ಯಾತ ಪತ್ರಕರ್ತರಾಗಿದ್ದ ಅಪರ್ಣಾರ ತಂದೆಯವರು ಇಂದ್ರಜಿತ್ ತಂದೆ ಲಂಕೇಶ್ ಅವರ ತಂದೆಯ ಬಳಿ ಆಗಾಗ್ಗೆ ಬರುತ್ತಿದ್ದ ಕಾರಣ ಅಪರ್ಣಾರನ್ನು ಬಾಲ್ಯದಿದಲೇ ಅವರ ಪರಿಚಯ ಎಂದು ಇಂದ್ರಜಿತ್; ನಿರೂಪಕಿ, ನ್ಯೂಸ್ ರೀಡರ್ ಮತ್ತು ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಅವರು ಆಗಲೇ ಸಾಕಷ್ಟು ಜನಪ್ರಿಯರಾಗಿದ್ದರಾದರೂ ಮಜಾ ಟಾಕೀಸ್ ಗೆ ಬಂದ ಬಳಿಕ ಅವರ ಕರೀಯರ್ ನಲ್ಲಿ ಮಹತ್ತರ ಬದಲಾವಣೆಯಾಯಿತು ಎಂದು ಹೇಳಿದರು. ಅರೂವರೆ ವರ್ಷಗಳ ಕಾಲ ಅವರು ಮಜಾ ಟಾಕೀಸ್ ಭಾಗವಾಗಿ ಅವರು ಜನರನ್ನು ರಂಜಿಸಿದರು ಮತ್ತು ಅವರ ವರಲಕ್ಷ್ಮಿ ಕ್ಯಾರೆಕ್ಟರ್​ಗೆ ಭಾರೀ ಜನಮನ್ನಣೆ ಸಿಕ್ಕಿತು ಎಂದು ನಿರ್ದೇಶಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ‘ನಮ್ಮ ಮೆಟ್ರೋ ಇರುವ ತನಕ ಅಪರ್ಣಾ ಧ್ವನಿ ಇರಬೇಕು’: ಸೃಜನ್​ ಲೋಕೇಶ್​ ಮನವಿ

Follow us on