ಆ್ಯಪಲ್ ಸಂಸ್ಥೆಯ ಫ್ಲ್ಯಾಗ್​ಶಿಪ್​ ಮಾಡೆಲ್ ಐಫೋನ್ 13 ಇನ್ನುಮುಂದೆ ಭಾರತದಲ್ಲೇ ತಯಾರಾಗಲಿದೆ!

ಐಫೋನ್ 13 ಉತ್ಪಾದನೆ ಭಾರತದಲ್ಲಿ ಆರಂಭಗೊಂಡ ಬಳಿಕ ಅದನ್ನು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಸಲು ಆ್ಯಪಲ್ ಸಂಸ್ಥೆಗೆ ನೆರವಾಗಲಿದೆ ಯಾಕೆಂದರೆ ಭಾರತದಲ್ಲಿ ತಯಾರಾಗುವ ಸಂಸ್ಥೆಯ ಉತ್ಪಾದನೆಗಳ ಶೇಕಡಾ 20-30 ರಷ್ಟು ಭಾಗ ರಫ್ತಾಗುತ್ತವೆ.

TV9kannada Web Team

| Edited By: shivaprasad.hs

Dec 23, 2021 | 7:51 AM

ಆ್ಯಪಲ್ ಸಂಸ್ಥೆಯ ಉತ್ಪಾದನೆಗಳಲ್ಲಿ ಐಫೋನ್ 13 ನಿಸ್ಸಂದೇಹವಾಗಿ ಫ್ಲ್ಯಾಗ್ಶಿಪ್ ಸಾಧನವಾಗಿದೆ. ನಿಮಗೆ ಗೊತ್ತಿರಬಹುದು, ಐಫೋನ್ 11 ಮತ್ತು 12 ಭಾರತದಲ್ಲಿ ತಯಾರಾಗುತ್ತವೆ ಆದರೆ ಐಫೋನ್ 13 ಮಾತ್ರ ತಯಾರಾಗುತ್ತಿರಲಿಲ್ಲ. ಖುಷಿಯ ವಿಷಯವೇನೆಂದರೆ ಐಫೋನ್ 13 ಅನ್ನುಆ್ಯಪಲ್ ಕಂಪನಿಯು ಭಾರತದಲ್ಲೂ ಪ್ರಾಯೋಗಿಕವಾಗಿ ಉತ್ಪಾದಿಸಲು ಆರಂಭಿಸಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಮೇರಿಕದ ಟೆಕ್ ದೈತ್ಯ ಎನಿಸಿಕೊಂಡಿರುವ ಆ್ಯಪಲ್ ಚೆನೈ ಬಳಿಯ ಫಾಕ್ಸ್ಕಾನ್ ಪ್ಲ್ಯಾಂಟ್​ನಲ್ಲಿ ಉತ್ಪಾದನೆಯನ್ನು ಆರಂಭಿಸಿದೆ. ಸಂಸ್ಥೆಯು ಎಲ್ಲ ಟಾಪ್ ಮಾಡೆಲ್ ಫೋನ್ಗಳನ್ನು ಭಾರತದಲ್ಲೂ ಉತ್ಪಾದಿಸುವ ನಿರ್ಣಯಕ್ಕೆ ಬಂದಿದೆ. ಭಾರತದಲ್ಲಿ ಐಫೋನ್ 13 ಕಮರ್ಷಿಯಲ್ ಉತ್ಪಾದನೆಯನ್ನು ಫೆಬ್ರುವರಿಯಲ್ಲಿ ಆರಂಭಿಸುವ ನಿರೀಕ್ಷೆ ಕಂಪನಿ ಇಟ್ಟುಕೊಂಡಿದೆ.

ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಈಗ ವಿಶ್ವದೆಲ್ಲೆಡೆ ದುರ್ಲಭವಾಗಿರುವ ಸೆಮಿಕಂಡಕ್ಟರ್ ಚಿಪ್​ಗಳ ಪೂರೈಕೆ ಲಭ್ಯವಾಗುವ ವ್ಯವಸ್ಥೆಯನ್ನು ಮಾಡಿಕೊಂಡ ನಂತರವೇ ಕಂಪನಿಗೆ ಐಫೋನ್ 13 ತಯಾರಿಕೆಯನ್ನು ಭಾರತದಲ್ಲಿ ವಿಸ್ತರಿಸಲು ಸಾಧ್ಯವಾಗಿದೆ.

ಐಫೋನ್ 13 ಉತ್ಪಾದನೆ ಭಾರತದಲ್ಲಿ ಆರಂಭಗೊಂಡ ಬಳಿಕ ಅದನ್ನು ಜಾಗತಿಕ ಮಾರುಕಟ್ಟೆಗಳಿಗೆ ಪೂರೈಸಲು ಆ್ಯಪಲ್ ಸಂಸ್ಥೆಗೆ ನೆರವಾಗಲಿದೆ ಯಾಕೆಂದರೆ ಭಾರತದಲ್ಲಿ ತಯಾರಾಗುವ ಸಂಸ್ಥೆಯ ಉತ್ಪಾದನೆಗಳ ಶೇಕಡಾ 20-30 ರಷ್ಟು ಭಾಗ ರಫ್ತಾಗುತ್ತವೆ.

ಏತನ್ಮಧ್ಯೆ, ಅತಿಹೆಚ್ಚು ಮಾರಾಟವಾಗುವ ಐಫೋನ್ ಗಳ ಪೂರೈಕೆಯಲ್ಲಿ ಸುಧಾರಣೆ ಕಂಡುಬಂದಿದೆ. ಐಫೋನ್ 13 ಸರಣಿಯಲ್ಲಿ ಅತಿಹೆಚ್ಚು ಮಾರಾಟವಾಗುವ ಮಾಡೆಲ್ ಅಂದರೆ ಐಫೋನ್ 13. ಮೂಲಗಳ ಪ್ರಕಾರ ಐಫೋನ್ 13 ಪ್ರೋ ಮತ್ತು ಐಫೋನ್ 13 ಪ್ರೋ ಮ್ಯಾಕ್ಸ್ ಮಾಡೆಲ್​ಗಳನ್ನು ಭಾರತದಲ್ಲಿ ತಯಾರಿಸುವ ಉದ್ದೇಶ ಕಂಪನಿಗೆ ಇಲ್ಲ

ಆ್ಯಪಲ್ ಕಂಪನಿ ಉತ್ಪಾದನೆಗಳ ಒಟ್ಟಾರೆ ಮಾರಾಟವಾಗುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಭಾರತದಲ್ಲಿ ತಯಾರಾಗುವ ಕಡಿಮೆ ಬೆಲೆಯ ಐಫೋನ್ 11 ಮತ್ತು ಐಫೋನ್ 12 ಸಿಂಹಪಾಲು ಹೊಂದಿವೆ.

ಐಫೋನ್ 11 ಮತ್ತು ಐಫೋನ್ 12 ಮಾಡೆಲ್​ಗಳನ್ನು ಚೆನೈನ ಫಾಕ್ಸ್ಕಾನ್ ಪ್ಲ್ಯಾಂಟ್ ಮತ್ತು ಐಪೋನ್ ಎಸ್ ಇ ಮಾಡೆಲ್​ಗಳನ್ನು ಬೆಂಗಳೂರಿನ ವಿಸ್ಟ್ರಾನ್ ಪ್ಲ್ಯಾಂಟ್​ನಲ್ಲಿ ​ ಆ್ಯಪಲ್ ಸಂಸ್ಥೆಯು ಉತ್ಪಾದಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಮಾರಾಟವಾಗುವ ಆ್ಯಪಲ್  ಸ್ಪಾರ್ಟ್​ಪೋನ್​​ಗಳಲ್ಲಿ   ಶೇಕಡಾ 70 ರಷ್ಟು ಇಲ್ಲೇ ತಯಾರಾಗುತ್ತವೆ.

Follow us on

Click on your DTH Provider to Add TV9 Kannada