Apple iPhone 15: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದೆ ಆ್ಯಪಲ್ ಐಫೋನ್ 15

Apple iPhone 15: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿದೆ ಆ್ಯಪಲ್ ಐಫೋನ್ 15

ಕಿರಣ್​ ಐಜಿ
|

Updated on: Jul 19, 2023 | 7:07 AM

ಆ್ಯಪಲ್, ಹೊಸ ಐಫೋನ್ ಬಿಡುಗಡೆ ಮಾಡುತ್ತದೆ ಎನ್ನುವಾಗ ಎಲ್ಲರ ಗಮನ ಅಲ್ಲಿರುತ್ತದೆ. ಈ ಬಾರಿ ಐಫೋನ್ 15 ಸರಣಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ನೂತನ ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹೊಸ ಮಾದರಿ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸೆಪ್ಟೆಂಬರ್​ನಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಬ್ಬದ ಸೀಸನ್ ಶುರುವಾಗುವ ಜತೆಗೇ, ಹೊಸ ಹೊಸ ಸರಣಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸುತ್ತವೆ. ಅದರಲ್ಲೂ ಆ್ಯಪಲ್, ಹೊಸ ಐಫೋನ್ ಬಿಡುಗಡೆ ಮಾಡುತ್ತದೆ ಎನ್ನುವಾಗ ಎಲ್ಲರ ಗಮನ ಅಲ್ಲಿರುತ್ತದೆ. ಈ ಬಾರಿ ಐಫೋನ್ 15 ಸರಣಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ನೂತನ ಸರಣಿಯಲ್ಲಿ ನಾಲ್ಕು ಮಾದರಿಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹೊಸ ಮಾದರಿ ಕುರಿತು ಹೆಚ್ಚಿನ ವಿವರ ಇಲ್ಲಿದೆ.