ನೀವು ಕ್ರೆಡಿಟ್​ ಕಾರ್ಡ್ ಬಳಸುತ್ತಿರಾ..! ಹಾಗಾದ್ರೆ ಅದರ ಮೇಲೊಂದು ಕಣ್ಣಿಟ್ಟಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 27, 2022 | 7:18 AM

ರಿಪೋರ್ಟ್ನನಲ್ಲಿ ಏನಾದರೂ ದೋಷ ಕಂಡುಬಂದರೆ ನೀವು ದೂರು ಸಲ್ಲಿಸಬಹುದು. ನಿಮ್ ಸಿಬಿಲ್ ಸ್ಕೋರ್ನ ಉಚಿತವಾಗಿ ಚೆಕ್ ಮಾಡೋದು ಹೇಗೆ? ಅದನ್ನ ಟೇಕ್ ಇಟ್ ಈಸಿಯ ಈ ವಿಡಿಯೋದಲ್ಲಿ ನೋಡಿ.

ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ಗಳನ್ನ ದುರ್ಬಳಕೆ ಮಾಡಿಕೊಂಡು ಹಣಕಾಸಿನ ವಂಚನೆ ಮಾಡೋ ಪ್ರಕರಣಗಳು ಜಾಸ್ತಿ ಆಗ್ತಿವೆ. ಅಂಥ ಪ್ರಕರಣಗಳು ಹೆಚ್ಚಾಗುತ್ತಿರುವಾಗ ನೀವು ನಿಮ್ಮ ಕ್ರೆಡಿಟ್ ರಿಪೋರ್ಟ್ ಮೇಲೆ ಯಾವಾಗ್ಲೂ ಒಂದ್ ಕಣ್ಣು ಇಟ್ಟಿರಲೇ ಬೇಕು. ಕ್ರೆಡಿಟ್ ಕಾರ್ಡ್​ ಬಳಸುತ್ತಿದ್ದರೆ ಕ್ರೆಡಿಟ್ ವರದಿಯನ್ನು ಟ್ರ್ಯಾಕ್ ಮಾಡಿ. ನಿಮ್ಮ ಕ್ರೆಡಿಟ್​ ಸ್ಕೋರ್ (Credi Score) ​ನ್ನು ಕಾಲಕಾಲಕ್ಕೆ ಪರಿಶೀಲಿಸಿ. ರೆಕ್ಟಿಫೈಕ್ರೆಡಿಟ್​ ಡಾಟ್ಕಾಮ್​ನ ಸಂಸ್ಥಾಪಕ ನಿರ್ದೇಶಕರಾದ ಅಪರ್ಣಾ ರಾಮಚಂದ್ರ ಪ್ರಕಾರ ಪ್ರತಿ 6 ತಿಂಗಳಿಗೊಮ್ಮೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ. ನಿಮ್ಮ ಕ್ರೆಡಿಟ್​ ರಿಪೋರ್ಟ್ನ ನೀವು ವರ್ಷಕ್ಕೊಮ್ಮೆ ಅದನ್ನ ತಯಾರಿಸೋ ಏಜೆನ್ಸಿಯಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಟ್ರಾನ್ಸ್ ಯೂನಿಯನ್​, ಸಿಬಲ್, ಈಕ್ಟಿಫ್ಯಾಕ್ಸ್, ಎಕ್ಸೀರಿಯಸ್ ಮತ್ತು ಹೈಮಾರ್ಕ್​ ಸಂಸ್ಥೆಗಳು ಉಚಿತ ಕ್ರೆಡಿಟ್ ರಿಪೋರ್ಟ್ಗಗಳನ್ನು ತಯಾರಿಸುವಂಥ ನಾಲ್ಕು ಸಂಸ್ಥೆಗಳು. ರಿಪೋರ್ಟ್ನನಲ್ಲಿ ಏನಾದರೂ ದೋಷ ಕಂಡುಬಂದರೆ ನೀವು ದೂರು ಸಲ್ಲಿಸಬಹುದು. ನಿಮ್ ಸಿಬಿಲ್ ಸ್ಕೋರ್ನ ಉಚಿತವಾಗಿ ಚೆಕ್ ಮಾಡೋದು ಹೇಗೆ? ಅದನ್ನ ಟೇಕ್ ಇಟ್ ಈಸಿಯ ಈ ವಿಡಿಯೋದಲ್ಲಿ ನೋಡಿ.

ಇದನ್ನೂ ಓದಿ:

ಅವಿಶ್ವಾಸ ನಿರ್ಣಯದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಸಚಿವರು ಕಣ್ಮರೆ