ಅವಿಶ್ವಾಸ ನಿರ್ಣಯದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಸಚಿವರು ಕಣ್ಮರೆ

ಏತನ್ಮಧ್ಯೆ, ಪಾಕಿಸ್ತಾನದ ಪ್ರಧಾನಿ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯು ಮಾರ್ಚ್ 28ಕ್ಕೆ ಮುಂದೂಡಲ್ಪಟ್ಟ ಬಳಿಕ ತೆಹ್ರೀಕ್-ಎ-ಇನ್ಸಾಫ್ ಪಕ್ಷದಿಂದ ಮಿತ್ರಪಕ್ಷಗಳನ್ನು ಓಲೈಸುವ ಕಾರ್ಯ ತೀವ್ರಗೊಂಡಿದೆ.

ಅವಿಶ್ವಾಸ ನಿರ್ಣಯದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ಸಚಿವರು ಕಣ್ಮರೆ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 6:40 AM

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯ (no-confidence motion) ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಅವರ ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಕನಿಷ್ಟ 50 ಸಚಿವರು ಕಣ್ಮರೆಯಾಗಿದ್ದು ಸಾರ್ವಜಿನಕವಾಗಿ ಅವರು ಕಂಡಿಲ್ಲವೆಂದು ಪಾಕಿಸ್ತಾನದ ಮಾಧ್ಯಮವೊಂದಯ ವರದಿ ಮಾಡಿದೆ. ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ (The Express Tribune) ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಕೇಂದ್ರೀಯ ಮತ್ತು ಪ್ರಾಂತೀಯ ಸೇರಿದಂತೆ 50 ಕ್ಕೂ ಹೆಚ್ಚು ಮಂತ್ರಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ನಾಪತ್ತೆಯಾಗಿರವರ ಪೈಕಿ 25 ಜನ ಕೇಂದ್ರೀಯ ಮತ್ತು ಪ್ರಾಂತೀಯ ಸಲಹೆಗಾರರಾಗಿದ್ದಾರೆ, 4 ವಿಶೇಷ ಸಹಾಯಕರು, ಮತ್ತು ಅವರಲ್ಲಿ 4 ರಾಜ್ಯ ಸಚಿವರು, 4 ಸಲಹೆಗಾರರು ಮತ್ತು 19 ವಿಶೇಷ ಸಹಾಯಕರು ಸೇರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಷ್ಟಾಗಿಯೂ, ಕೇಂದ್ರೀಯ ಹಂತದಲ್ಲಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಸಚಿವರ ಬೆಂಬಲವಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ ಮೆಹಮೂದ್ ಖುರೇಶಿ, ವಾರ್ತಾ ಸಚಿವ ಫಾವದ್ ಚೌಧುರಿ, ಇಂಧನ ಖಾತೆ ಸಚಿವ ಹಮ್ಮದ್ ಅಝರ್, ರಕ್ಷಣಾ ಸಚಿವ ಪರ್ವೆಜ್ ಖತ್ತಕ್, ಆಂತರಿಕ ಸಚಿವ ಶೇಖ್ ರಶೀದ್ ಮೊದಲಾದವರೆಲ್ಲ ಈಗಲೂ ಇನ್ರಾನ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ಏತನ್ಮಧ್ಯೆ, ಪಾಕಿಸ್ತಾನದ ಪ್ರಧಾನಿ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಯು ಮಾರ್ಚ್ 28ಕ್ಕೆ ಮುಂದೂಡಲ್ಪಟ್ಟ ಬಳಿಕ ತೆಹ್ರೀಕ್-ಎ-ಇನ್ಸಾಫ್ ಪಕ್ಷದಿಂದ ಮಿತ್ರಪಕ್ಷಗಳನ್ನು ಓಲೈಸುವ ಕಾರ್ಯ ತೀವ್ರಗೊಂಡಿದೆ.

ಮೂಲಗಳ ಪ್ರಕಾರ ಮುತ್ತಹಿದಾ ಕ್ವಾಮಿ ಮೂವ್ಮೆಂಟ್-ಪಾಕಿಸ್ತಾನ (ಎಮ್ ಕ್ಯೂ ಎಮ್-ಪಿ) ಪಕ್ಷದ ನಿಯೋಗವೊಂದು ಶನಿವಾರ ಸಾಯಂಕಾಲ ಪಾಕಿಸ್ತಾನದ ಪ್ರಧಾನ ಮಂತ್ರಿ ಅವರೊಂದಿಗೆ ಸಭೆ ನಡೆಸುವುದು ನಿಗದಿಯಾಗಿತ್ತು.

ವಿದೇಶಾಂಗ ಸಚಿವ ಶಾಹ ಮೆಹಮೂದ್ ಖುರೇಶಿ ಶುಕ್ರವಾರದಂದು ಆಡಳಿತ ರೂಢ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಪ್ರಮುಖ ಮಿತ್ರಪಕ್ಷಗಳಾಗಿರುವ ಎಮ್ ಕ್ಯೂ ಎಮ್-ಪಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ಕೈದ್ (ಪಿ ಎಮ್ ಎಲ್-ಕ್ಯೂ) ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಕುರೇಶಿ ಅವರು ಅಸರ್ ಉಮರ್ ಮತ್ತು ಪರ್ವೇಜ್ ಖತ್ತಕ್ ಅವರೊಂದಿಗೆ ಎಮ್ ಕ್ಯೂ ಎಮ್ ನಿಯೋಗವನ್ನು ಭೇಟಿಯಾದರು. ಪಿ ಎಮ್ ಎಲ್-ಕ್ಯೂ ಪಕ್ಷದ ನಾಯಕ ಚೌಧುರಿ ಪರ್ವೇಜ್ ಇಲಾಹಿ ಅವರೊಂದಿಗೆ ಖುರೇಶಿ ಟೆಲಿಫೋನ್ ಸಂಭಾಷಣೆ ನಡೆಸಿದರು.

ಇದಕ್ಕೂ ಮೊದಲು ಅಂದರೆ ಗುರುವಾರದಂದು ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕರು ಎಮ್ ಕ್ಯೂ ಎಮ್ ನಾಯಕರೊಂದಿಗೆ ಮಾತುಕತೆ ನಡೆಸಿ ಮಿತ್ರಪಕ್ಷಗಳೆಲ್ಲ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ಮುಂದುವರಿಸಲಿವೆ ಮತ್ತು ವೋಟಿಂಗ್ ದಿನದಂದು ನ್ಯಾಶನಲ್ ಅಸೆಂಬ್ಲಿಯಲ್ಲಿ ಪಾಕಿಸ್ತಾನದ ಪ್ರಧಾನಿ ಪರ ವೋಟು ಮಾಡಲಿವೆ ಎಂದು ಮನದಟ್ಟು ಮಾಡಿಸಿದರು ಎಂದು ವರದಿಯಾಗಿದೆ.

ಪಾಕಿಸ್ತಾನ ನ್ಯಾಶನಲ್ ಅಸೆಂಬ್ಲಿಯ ಒಟ್ಟು ಸದಸ್ಯ ಬಲ 342 ಅಗಿದ್ದು, ಬಹುಮತ ಹೊಂದಲು 179 ಸ್ಥಾನಗಳನ್ನು ಹೊಂದಿರಬೇಕು. ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನೇತೃತ್ವದಲ್ಲಿ 179 ಸದಸ್ಯರನ್ನೊಳಗೊಂಡ ಸಮ್ಮಿಶ್ರ ಸರ್ಕಾರವನ್ನು ರಚಿಸಲಾಗಿದೆ.

ಇಮ್ರಾನ್ ಅವರ ತೆಹ್ರೀಕ್-ಎ-ಇನ್ಸಾಫ್ ಪಕ್ಷ 155 ಸದಸ್ಯರನ್ನು ಹೊಂದಿದ್ದರೆ, ಅದರ ನಾಲ್ಕು ಪ್ರಮುಖ ಮಿತ್ರಪಕ್ಷಗಳಾದ ಎಮ್ ಕ್ಯೂ ಎಮ್-ಪಿ, ಪಿ ಎಮ್ ಎಲ್-ಕ್ಯೂ, ಬಲೂಚಿಸ್ತಾನ ಅವಾಮಿ ಪಾರ್ಟಿ (ಬಿಎಪಿ), ಮತ್ತು ಗ್ರ್ಯಾಂಡ್ ಡಮೆಕ್ರ್ಯಾಟಿಕ್ ಅಲಯನ್ಸ್ ಕ್ರಮವಾಗಿ ಏಳು, ಐದು, ಐದು ಮತ್ತು ಮೂರು ಸದಸ್ಯರನ್ನು ಹೊಂದಿವೆ.

ಇದನ್ನೂ ಓದಿ:   Imran Khan: ಭಾರತ- ಪಾಕ್ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸಲು ಟಿವಿ ಚರ್ಚೆ ನಡೆಸೋಣ; ಪ್ರಧಾನಿ ಮೋದಿಗೆ ಇಮ್ರಾನ್ ಖಾನ್ ಆಹ್ವಾನ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್