ಸುಪ್ರೀಮ್ ಕೋರ್ಟ್ ನಲ್ಲಿ ಕಾವೇರಿ ವಿವಾದ ನಾಳೆ ಪುನಃ ವಿಚಾರಣೆಗೆ ಬರಲಿದೆ, ನಮ್ಮ ವಾದವನ್ನು ಮತ್ತಷ್ಟು ಗಟ್ಟಿಯಾಗಿ ಮಂಡಿಸಲಾಗುವುದು: ಸಿದ್ದರಾಮಯ್ಯ, ಸಿಎಂ

|

Updated on: Sep 25, 2023 | 2:14 PM

ಸರ್ವೋಚ್ಛ ನ್ಯಾಯಾಲಯ ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ಮನವಿಗಳನ್ನು ತಿರಸ್ಕರಿಸಿದೆ. ತಮಿಳನಾಡು 24,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು, ನ್ಯಾಯಾಲಯದಲ್ಲಿ ವಾದ ನಡೆಯುವಾಗ ಬೇಡಿಕೆಯನ್ನು 7,200 ಕ್ಯೂಸೆಕ್ಸ್ ಗೆ ಇಳಿಸಿತ್ತು. ಕರ್ನಾಟಕ ಸರ್ಕಾರ 5,000 ಕ್ಯೂಸೆಕ್ಸ್ ನೀರು ಹರಿಸುವುದು ಕೂಡ ಸಾಧ್ಯವಾಗುತ್ತಿಲ್ಲ ಅಂತ ವಾದ ಮಾಡಿತ್ತು ಎಂದು ಸಿದ್ದರಾಮಯ್ಯ ಹೇಳಿದರು,

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಪ್ರತಿಭಟನೆಗಳು ತೀವ್ರಗೊಂಡಿವೆ. ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು ಹಲವಾರು ಸಂಘಟನೆಗಳು ಇದರಲ್ಲಿ ಭಾಗವಹಿಸುತ್ತಿವೆ. ಪ್ರತಿಭಟನೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಪ್ರತಿಕ್ರಿಯೆ ಕೇಳಿದಾಗ ಅವರು ಸರ್ಕಾರದ ಅಸಹಾಯಕತೆಯ ಬಗ್ಗೆ ಹೇಳಿದರು. ಸರ್ವೋಚ್ಛ ನ್ಯಾಯಾಲಯ (Supreme Court) ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ಮನವಿಗಳನ್ನು (petitions) ತಿರಸ್ಕರಿಸಿದೆ. ತಮಿಳನಾಡು 24,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು, ನ್ಯಾಯಾಲಯದಲ್ಲಿ ವಾದ ನಡೆಯುವಾಗ ಬೇಡಿಕೆಯನ್ನು 7,200 ಕ್ಯೂಸೆಕ್ಸ್ ಗೆ ಇಳಿಸಿತ್ತು. ಕರ್ನಾಟಕ ಸರ್ಕಾರ 5,000 ಕ್ಯೂಸೆಕ್ಸ್ ನೀರು ಹರಿಸುವುದು ಕೂಡ ಸಾಧ್ಯವಾಗುತ್ತಿಲ್ಲ ಅಂತ ವಾದ ಮಾಡಿತ್ತು. ನ್ಯಾಯಾಲಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಮಂಡಳಿ ನೀಡಿರುವ ಸೂಚನೆಗೆ ಬದ್ಧರಾಗಿರಿ ಅಂತ ಆದೇಶಿಸಿತ್ತು. ಸೆಪ್ಟೆಂಬರ್ 26 ರಂದು ಸುಪ್ರೀಮ್ ಕೋರ್ಟ್ ನಲ್ಲಿ ಮತ್ತೊಮ್ಮೆ ವಿಚಾರಣೆ ನಡೆಯಲಿದೆ, ಆಗ ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದ ವಾದ ಮಂಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ