ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ

Updated on: May 15, 2025 | 10:47 AM

ಅರ್ಜುನ್ ಜನ್ಯ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅರ್ಜುನ್ ಜನ್ಯ ಅವರು ಈಗ ಮಗಳು ರಂಜಿತಾನ ಎಲ್ಲರಿಗೂ ತೋರಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ .

ಅರ್ಜುನ್ ಜನ್ಯ (Arjun Janya) ಅವರು ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಕಳೆದ ವಾರ ರಾಜೇಶ್ ಕೃಷ್ಣನ್ ತಾಯಿ ಅವರು ವೇದಿಕೆ ಏರಿದ್ದರು. ಈ ವಾರ ಅರ್ಜುನ್ ಜನ್ಯ ಮಗಳು ವೇದಿಕೆ ಮೇಲೆ ಬಂದಿದ್ದಾರೆ. ಅವರು ತಂದೆಯನ್ನು ವೇದಿಕೆ ಮೇಲೆ ಹಾಡಿ ಹೊಗಳಿದ್ದಾರೆ. ‘ನನ್ನ ಮ್ಯೂಸಿಕ್ ಜರ್ನಿಗೆ ಅಪ್ಪ ಸಹಾಯ ಮಾಡಿದ್ದಾರೆ. ಅವರು ಡೈರೆಕ್ಷನ್ ಕೂಡ ಮಾಡಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದರು ರಜಿತಾ. ಕೀಬೋರ್ಡ್ ಕೂಡ ನುಡಿಸಿದರು ರಜಿತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.