Chiranjeevi Sarja: ಚಿತ್ರರಂಗಕ್ಕೆ ಚಿರು ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿ ನೀಡುವ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು?
Raayan Raj Sarja: ಚಿರಂಜೀವಿ ಸರ್ಜಾ ರೀತಿಯಲ್ಲಿ ಅವರ ಪುತ್ರ ರಾಯನ್ ರಾಜ್ ಸರ್ಜಾನನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಲು ಅರ್ಜುನ್ ಸರ್ಜಾ ಕನಸು ಕಂಡಿದ್ದಾರೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.
ಅರ್ಜುನ್ ಸರ್ಜಾ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ. ಅವರ ಸೋದರಳಿಯ ಚಿರಂಜೀವಿ ಸರ್ಜಾ (Chiranjeevi Sarja) ಅವರು ಚಿತ್ರರಂಗದಲ್ಲಿ ಸ್ಟಾರ್ ನಟ ಆಗಿದ್ದರು. ಆದರೆ ಅವರು ಹೃದಯಾಘಾತದಿಂದ ಅಕಾಲಿಕ ಮರಣಹೊಂದಿದ್ದು ನೋವಿನ ಸಂಗತಿ. ಚಿರು ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯವನ್ನು ಕುಟುಂಬದವರು ಮಂಗಳವಾರ (ಜೂನ್ 7) ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿಯ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಕುರಿತು ಅರ್ಜುನ್ ಸರ್ಜಾ ಅವರು ಮಾತನಾಡಿದ್ದಾರೆ. ‘ರಾಜಮಾರ್ತಾಂಡ’ ಸಿನಿಮಾದಲ್ಲಿ ರಾಯನ್ ನಟಿಸಿದ್ದಾನೆ. ಮುಂದಿನ ದಿನಗಳಲ್ಲಿ ಆತನನ್ನು ಅದ್ದೂರಿಯಾಗಿ ಚಿತ್ರರಂಗದಲ್ಲಿ ಲಾಂಚ್ ಮಾಡುವ ಕನಸನ್ನು ಅರ್ಜುನ್ ಸರ್ಜಾ ಇಟ್ಟುಕೊಂಡಿದ್ದಾರೆ. ‘ಶಕ್ತಿ ಇದ್ದರೆ ನಾನೇ ಅವನನ್ನು ಲಾಂಚ್ ಮಾಡುತ್ತೇನೆ. ಆಗ ಅವನ 100 ಅಡಿ ಕಟೌಟ್ ನೋಡುತ್ತೇನೆ’ ಎಂದು ಅರ್ಜುನ್ ಸರ್ಜಾ (Arjun Sarja) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.