PM Narendra Modi Tumakuru Visit: ಪ್ರಧಾನಿಗಳ ಕಾರ್ಯಕ್ರಮಕ್ಕೆ ಯುದ್ಧೋಪಾದಿಯಲ್ಲಿ ಕೆಲಸಗಳು ಜಾರಿಯಲ್ಲಿವೆ
ಪಕ್ಷದ ಸುಮಾರು 50,000 ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತಾಡಲಿದ್ದಾರೆ. ಅಷ್ಟು ದೊಡ್ಡ ಜನಸ್ತೋಮಕ್ಕಾಗಿ ಊಟ-ತಿಂಡಿ, ನೀರು ಮತ್ತು ಕೂರಲು ಸ್ಥಳದ ವ್ಯವಸ್ಥೆ ಮಾಡಲಾಗುತ್ತಿದೆ.
ತುಮಕೂರು ಜಿಲ್ಲಾಡಳಿತ ಕಳೆದೊಂದು ವಾರದಿಂದ ನಿದ್ರಿಸಿರಲಿಕ್ಕಿಲ್ಲ. ಕಾರಣ ನಿಮಗೆ ಗೊತ್ತಿದೆ. ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ಸ್ಥಾಪಿಸಲಾಗಿರುವ ಹೆಚ್ ಎ ಎಲ್ (HAL) ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು (manufacturing unit) ಲೋಕಾರ್ಪಣೆ ಮಾಡಲು ಆಗಮಿಸುತ್ತಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಇನ್ನೆರಡು ಮೂರು ತಿಂಗಳಲ್ಲಿ ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆಯಲಿರುವುದರಿಂದ ಪ್ರಧಾನಿಯವರ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಟಿವಿ9 ತುಮಕೂರು ಜಿಲ್ಲಾ ವರದಿಗಾರರು ತಿಳಿಸುತ್ತಿರುವ ಹಾಗೆ ಪಕ್ಷದ ಸುಮಾರು 50,000 ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತಾಡಲಿದ್ದಾರೆ. ಅಷ್ಟು ದೊಡ್ಡ ಜನಸ್ತೋಮಕ್ಕಾಗಿ ಊಟ-ತಿಂಡಿ, ನೀರು ಮತ್ತು ಕೂರಲು ಸ್ಥಳದ ವ್ಯವಸ್ಥೆ ಮಾಡಲಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Feb 02, 2023 04:13 PM