AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 1 ಓವರ್​ನಲ್ಲಿ 7 ವೈಡ್, 13 ಎಸೆತ ಎಸೆದ ಅರ್ಷದೀಪ್; ಉಗ್ರರೂಪ ತಾಳಿದ ಗಂಭೀರ್

IND vs SA: 1 ಓವರ್​ನಲ್ಲಿ 7 ವೈಡ್, 13 ಎಸೆತ ಎಸೆದ ಅರ್ಷದೀಪ್; ಉಗ್ರರೂಪ ತಾಳಿದ ಗಂಭೀರ್

ಪೃಥ್ವಿಶಂಕರ
|

Updated on: Dec 11, 2025 | 9:45 PM

Share

Arshdeep Singh's Costly T20 Over: ಅರ್ಷದೀಪ್ ಸಿಂಗ್ ಎರಡನೇ T20 ಪಂದ್ಯದಲ್ಲಿ ಯಾರೂ ನಿರೀಕ್ಷಿಸದ ಪ್ರದರ್ಶನ ನೀಡಿದ್ದಾರೆ. ಒಂದು ಓವರ್‌ನಲ್ಲಿ 13 ಎಸೆತಗಳನ್ನು ಎಸೆದು, 7 ವೈಡ್‌ಗಳನ್ನು ಬಿಟ್ಟುಕೊಟ್ಟು 18 ರನ್‌ಗಳನ್ನು ನೀಡಿದ ಅವರ ಬೌಲಿಂಗ್ ಕೋಚ್ ಗೌತಮ್ ಗಂಭೀರ್ ಅವರ ಕೋಪಕ್ಕೆ ಕಾರಣವಾಯಿತು. T20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಷ್ಟು ದೀರ್ಘ ಓವರ್ ಬೌಲಿಂಗ್ ಮಾಡಿದ ಮೊದಲ ಭಾರತೀಯ ಎಂಬ ಅನಗತ್ಯ ದಾಖಲೆಗೆ ಅರ್ಷದೀಪ್ ಪಾತ್ರರಾಗಿದ್ದಾರೆ. ಇದು ಟೀಂ ಇಂಡಿಯಾಕ್ಕೆ ನಷ್ಟ ಉಂಟುಮಾಡಿತು.

ಭಾರತದ ಅತ್ಯಂತ ಯಶಸ್ವಿ ಟಿ20 ಅಂತಾರಾಷ್ಟ್ರೀಯ ಬೌಲರ್ ಅರ್ಷದೀಪ್ ಸಿಂಗ್ ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಕಬಳಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಆದರೆ ಸ್ವತಃ ಅವರ ತವರು ನೆಲದಲ್ಲಿ ಅವರು ಯಾರೂ ನಿರೀಕ್ಷಿಸದ ಪ್ರದರ್ಶನ ನೀಡಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಾಸ್ತವವಾಗಿ, ಎರಡನೇ ಟಿ20ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ತಮ್ಮ ಮೂರನೇ ಓವರ್ ಪೂರ್ಣಗೊಳಿಸಲು 13 ಎಸೆತಗಳನ್ನು ಎಸೆದರು. ಇದು ಗುರು ಗಂಭೀರ್ ಅವರನ್ನು ಕೆರಳಿಸಿತು.

ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ದಾಳಿಗಿಳಿದ ಅರ್ಷದೀಪ್ ಸಿಂಗ್ ಅವರ ಮೊದಲ ಎಸೆತವನ್ನು ಡಿ ಕಾಕ್ ಸಿಕ್ಸರ್​ಗಟ್ಟಿದರು. ಆದರೆ ಆ ನಂತರದ ಎರಡು ಎಸೆತಗಳನ್ನು ಅರ್ಷದೀಪ್ ವೈಡ್‌ ಎಸೆದರು. ನಂತರದ ಒಂದು ಎಸೆತವನ್ನು ಎಸೆದ ಬಳಿಕ ಮತ್ತೆ 4 ಎಸೆತಗಳು ವೈಡ್ ಆದವು. ಆ ಬಳಿಕ ಕೊನೆಯ ಎಸೆತವನ್ನು ಅರ್ಷದೀಪ್ ವೈಡ್ ಎಸೆದರು. ಈ ಓವರ್‌ನಲ್ಲಿ ಅರ್ಷದೀಪ್ ಸಿಂಗ್ 13 ಎಸೆತಗಳನ್ನು ಎಸೆದು 18 ರನ್‌ಗಳನ್ನು ಬಿಟ್ಟುಕೊಟ್ಟರು. ಇದನ್ನು ಗಮನಿಸಿದ ಮುಖ್ಯ ಕೋಚ್ ಗೌತಮ್ ಗಂಭೀರ್ ಡ್ರೆಸ್ಸಿಂಗ್ ಕೋಣೆಯಲ್ಲಿ ಕೋಪಗೊಂಡವರಂತೆ ಕಾಣಿಸಿಕೊಂಡರು.

ಒಂದು ಓವರ್‌ನಲ್ಲಿ 7 ವೈಡ್ ಬಾಲ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ಅರ್ಷದೀಪ್ ಸಿಂಗ್ ಅನಗತ್ಯ ದಾಖಲೆಯನ್ನು ಸೃಷ್ಟಿಸಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಷ್ಟು ದೀರ್ಘ ಓವರ್ ಬೌಲಿಂಗ್ ಮಾಡಿದ ಮೊದಲ ಭಾರತೀಯ ಅರ್ಷದೀಪ್ ಸಿಂಗ್. ಅವರಿಗಿಂತ ಮೊದಲು, ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಕೂಡ ಒಂದು ಓವರ್‌ನಲ್ಲಿ 13 ಎಸೆತಗಳನ್ನು ಬೌಲಿಂಗ್ ಮಾಡಿದ್ದಾರೆ. ಅರ್ಷದೀಪ್ ಸಿಂಗ್ ಸಾಮಾನ್ಯವಾಗಿ ಟಿ20 ಕ್ರಿಕೆಟ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಅವರ ದಾಖಲೆ ಇದಕ್ಕೆ ಸಾಕ್ಷಿಯಾಗಿದೆ, ಆದರೆ ಎರಡನೇ ಟಿ20ಯಲ್ಲಿ ಅವರ ಲಯ ತಪ್ಪಿತ್ತು, ಇದು ಟೀಂ ಇಂಡಿಯಾಕ್ಕೂ ನಷ್ಟವನ್ನುಂಟು ಮಾಡಿತು. ಅರ್ಷದೀಪ್ ಸಿಂಗ್ ತಮ್ಮ ನಾಲ್ಕು ಓವರ್‌ಗಳಲ್ಲಿ 54 ರನ್‌ಗಳನ್ನು ಬಿಟ್ಟುಕೊಟ್ಟರು.