ಮಳೆಯಿಂದ ಪ್ರಭಾವಿತ ಪ್ರದೇಶಗಳ ಪರಿಶೀಲನೆಗೆ ಹೋಗುವ ಸಿದ್ದರಾಮಯ್ಯಗೆ ರೆಡ್ ಕಾರ್ಪೆಟ್ ಸ್ವಾಗತ?

ಅರುಣ್​ ಕುಮಾರ್​ ಬೆಳ್ಳಿ

Updated on: May 21, 2025 | 4:33 PM

ನಮ್ಮ ವರದಿಗಾರ ಸ್ಥಳೀಯ ವ್ಯಕ್ತಿಯೊಬ್ಬರೊಂದಿಗೆ ಮಾತಾಡಿದ್ದಾರೆ. ಅವರು ಸ್ಪಷ್ಟವಾಗಿ ಹೇಳುತ್ತಾರೆ, ಮಳೆಗಾಲದಲ್ಲಿ ನಮ್ಮ ಬದುಕನ್ನು ನರಕ ಮಾಡುವ ರಸ್ತೆ ಮತ್ತು ಚರಂಡಿಗಳಿಂದ ಶಾಶ್ವತವಾದ ಪರಿಹಾರ ಬೇಕಿದೆ, ಪರಿಹಾರವೆಂದರೆ ಹಣವಲ್ಲ, ಸಮಸ್ಯೆಗಳ ಪರಿಹಾರ, 15 ವರ್ಷಗಳಿಂದ ಹೆಚ್​ಬಿಅರ್ ಲೇಔಟ್​ನಲ್ಲಿ ವಾಸವಾಗಿದ್ದೇವೆ, ಪ್ರತಿವರ್ಷ ಅದೇ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅವರ ಮಾತು ದೊರೆಗಳ ಕಿವಿಗೆ ಬೀಳುತ್ತಿದೆಯೇ?

ಬೆಂಗಳೂರು, ಮೇ 21: ಮಳೆಯಿಂದ ನಗರದಲ್ಲಾಗಿರುವ ಹಾನಿ, ಆಸ್ತಿಪಾಸ್ತಿ ನಷ್ಟ ವೀಕ್ಷಿಸಲು ಮುಖ್ಯಮಂತ್ರಿಯವರು (chief minister) ಹೊರಟರೆ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತವೇ? ಸಿದ್ದರಾಮಯ್ಯನವರಿಗೆ ಇದು ಬೇಕೋ ಬೇಡ್ವೋ ಗೊತ್ತಿಲ್ಲ, ಅದರೆ ಬಿಬಿಎಂಪಿ ಅಧಿಕಾರಿಗಳ ಭಟ್ಟಂಗಿತನಕ್ಕೆ ಎಣೆಯಿಲ್ಲ ಮಾರಾಯ್ರೇ. ಇಲ್ನೋಡಿ, ಹೆಚ್​ಬಿಅರ್ ಲೇ ಔಟ್ ಐದನೇ ಬ್ಲಾಕ್​​ನಲ್ಲಿ ರಾಜಾಕಾಲುವೆ ಪಕ್ಕದಲ್ಲೇ ಸಿಎಂಗಾಗಿ ಒಂದು ಸ್ಟೇಜು ಮತ್ತು ಅದರ ಮೇಲೆ ರೆಡ್ ಕಾರ್ಪೆಟ್! ಚರಂಡಿಯಿಂದ ದುರ್ನಾತ ಬರುತ್ತಿದೆ, ಇಲ್ಲಿನ ರಸ್ತೆಗಳಲ್ಲಿ ಹೊಂಡಗಳಂಥ ಗುಂಡಿಗಳು. ಜನ ಮಳೆಯಿಂದ ರೋಸಿಹೋಗಿದ್ದಾರೆ ಮತ್ತು ಮಳೆಗಾಲ ಶುರುವಾಗುವ ಮೊದಲು ಏನಾದರೂ ವ್ಯವಸ್ಥೆ ಮಾಡಿ ಅಂತ ಅಂಗಲಾಚುತ್ತಿದ್ದಾರೆ. ರಸ್ತೆಗಳನ್ನು ಸರಿ ಮಾಡದ ಅಧಿಕಾರಿಗಳು ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ!

ಇದನ್ನೂ ಓದಿ:  ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.