‘ಅಶ್ವಿನಿ ಗೌಡ ಬಿಗ್ ಬಾಸ್ ವಿನ್ ಆಗಲು ಹೀಗೆ ಮಾಡಬೇಕು’; ಟಿಪ್ಸ್ ಕೊಟ್ಟ ಆ್ಯಶ್

Updated By: ರಾಜೇಶ್ ದುಗ್ಗುಮನೆ

Updated on: Oct 20, 2025 | 8:07 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಜಾನ್ವಿ ಹಾಗೂ ಅಶ್ವಿನಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಈಗ ದೊಡ್ಮನೆಯಿಂದ ಹೊರ ಬಂದ ಆ್ಯಶ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿಗೆ ಮಾರಿ ಹಬ್ಬ ಇದೆ ಎಂದು ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಆ್ಯಶ್ (ಅಶ್ವಿನಿ) ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದರು ಮತ್ತು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ರಘು ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಗೌಡ ಅವರ ಬಗ್ಗೆಯೂ ಅವರು ಒಂದು ಮಾತು ಹೇಳಿದರು. ‘ರಘು ಅವರು ಸ್ಟ್ರಾಂಗ್ ಆಗಿದ್ದಾರೆ. ಸುಧಿ ಹಾಗೆ ಇರ್ತಾರೆ ಎಂದುಕೊಂಡಿದ್ದೆವು. ಆದರೆ, ಹಾಗಾಗಿಲ್ಲ. ಅಶ್ವಿನಿ ಗೌಡ ಅವರು ತಪ್ಪು ತಿದ್ದುಕೊಂಡರೆ ಒಳ್ಳೆಯ ಸ್ಪರ್ಧಿ’ ಎಂದು ಅಶ್ವಿನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.