ಆಷಾಡ ಕೊನೆ ಸೋಮವಾರ; ಭೋಗನಂದೀಶ್ವರ ದೇವಸ್ಥಾನದಲ್ಲಿ ಜನ ಸಾಗರ, 17 ಕಿಮೀ ಗಿರಿ ಪ್ರದಕ್ಷಿಣೆ ಹಾಕಿದ ಭಕ್ತರು
ಆಷಾಢ ಮಾಸದ ಕೊನೇ ಸೋಮವಾರ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಸಾವಿರಾರು ಭಕ್ತರು ಗಿರಿ ಪ್ರದರ್ಶಿಣೆಯಲ್ಲಿ ಭಾಗವಹಿಸಿದ್ದಾರೆ. ಭಕ್ತರು ಮೊದಲು ಭೋಗನಂದೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ 17 ಕಿ.ಮೀ ಪಾದಯಾತ್ರೆ ಮೂಲಕ ಗಿರಿಯನ್ನು ಸುತ್ತಲಿದ್ದಾರೆ.
ಚಿಕ್ಕಬಳ್ಳಾಪುರ, ಜುಲೈ.29: ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನದಲ್ಲಿ (Bhoganandishwara Temple) ಜನಸಾಗರವೇ ಹರಿದು ಬಂದಿದೆ. ದಕ್ಷಿಣ ಕಾಶಿ ನಂದಿ ಕ್ಷೇತ್ರದಲ್ಲಿ ಪ್ರತಿ ವರ್ಷ ಆಷಾಡ ಮಾಸದ (Ashada Masam) ಕೊನೆಯ ಸೋಮವಾರದಂದು ಗಿರಿ ಪ್ರದಕ್ಷಿಣೆ (Giri Pradakshina) ನಡೆಯುತ್ತೆ. ಈ ಗಿರಿ ಪ್ರದಕ್ಷಿಣೆಯಲ್ಲಿ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದಾರೆ. 17 ಕಿಲೋ ಮೀಟರ್ ದೂರ ಪಾದಯಾತ್ರೆ ನಡೆಸಿ ಭಕ್ತಿ ಮೆರೆದಿದ್ದಾರೆ.
ಗಿರಿ ಪ್ರದಕ್ಷಿಣೆ ಮಾಡುವ ಭಕ್ತರು ನಂದಿಗಿರಿಧಾಮವನ್ನು ಸುತ್ತುಹಾಕುತ್ತಾರೆ. ನಂದಿಗಿರಿಧಾಮ ಸುತ್ತಿದರೆ ಕೈಲಾಸ ಸುತ್ತಿದ ಹಾಗೆ ಎನ್ನುವ ನಂಬಿಕೆ ಇದೆ. ಗಿರಿ ಪ್ರದಕ್ಷಿಣೆಗೂ ಮುನ್ನ ಭಕ್ತರು ಭೋಗನಂದೀಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ದರ್ಶನದ ನಂತರ ಗಿರಿ ಪ್ರದಕ್ಷಿಣೆ ಹಾಕಲಾಗುತ್ತೆ. ಇನ್ನು ಇವತ್ತು ದೇವರ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ನೂಕುನುಗ್ಗಲಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ