ಸುದೀಪ್ ಬುದ್ಧಿವಾದದ ಬಳಿಕವೂ ಮತ್ತೆ ಜಗಳಕ್ಕೆ ಇಳಿದ ಅಶ್ವಿನಿ ಗೌಡ
ಅಶ್ವಿನಿ ಗೌಡ ಅವರು ಸಣ್ಣ ವಿಚಾರಕ್ಕೂ ಸಿಟ್ಟಾಗುತ್ತಾರೆ. ಈ ವಿಷಯದಲ್ಲಿ ಅವರಿಗೆ ಬೇಸರ ಇದೆ. ಆದರೆ, ಅವರು ತಮ್ಮನ್ನು ತಾವು ಬದಲಿಸಿಕೊಳ್ಳುವ ಆಲೋಚನೆಯಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಸಿಕ್ಕಿದೆ. ಅವರು ಜಗಳಕ್ಕೆ ಇಳಿದಿದ್ದಾರೆ. ಆ ಪ್ರೋಮೋ ವೈರಲ್ ಆಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರು ಜನಪ್ರಿಯತೆಗಿಂತ ಹೆಚ್ಚಾಗಿ ಕುಖ್ಯಾತಿ ಪಡೆದಿದ್ದೇ ಹೆಚ್ಚು. ಪ್ರತಿ ವಾರ ಒಂದಲ್ಲ ಒಂದು ತಪ್ಪು ಮಾಡಿ ಟೀಕೆಗೆ ಗುರಿಯಾಗುತ್ತಾರೆ. ಕಳೆದ ವಾರ ಅವರು ಸುದೀಪ್ ಕಡೆಯಿಂದ ಪಾಠ ಹೇಳಿಸಿಕೊಳ್ಳಬೇಕಾಯಿತು. ಈಗ ಈ ವಾರ ಮತ್ತೆ ರೋಷದೊಂದಿಗೆ ಆರಂಭಿಸಿದ್ದಾರೆ. ನಾಮಿನೇಟ್ ಮಾಡಿದ ಧ್ರುವಂತ್ ವಿರುದ್ಧ ಅಶ್ವಿನಿ ಸಿಟ್ಟಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
