‘ಜಾಕಿ’ ಸಿನಿಮಾ ನೋಡಲು ಬಂದು ಚಿತ್ರಮಂದಿರದಲ್ಲಿ ಭಾವುಕರಾಗಿ ನಿಂತ ಅಶ್ವಿನಿ ಪುನೀತ್​ ರಾಜ್​ಕುಮಾರ್​

Updated on: Mar 15, 2024 | 8:44 PM

ಎಷ್ಟು ವರ್ಷಗಳು ಉರುಳಿದರೂ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಮೇಲೆ ಜನರು ಇಟ್ಟಿರುವ ಅಭಿಮಾನ ಕಡಿಮೆ ಆಗುವುದಿಲ್ಲ. ಇಂದು ‘ಜಾಕಿ’ ಸಿನಿಮಾ ಮರು ಬಿಡುಗಡೆ ಆಗಿದ್ದು, ಚಿತ್ರಮಂದಿರದಲ್ಲಿ ಅಭಿಮಾನಿಗಳ ಪ್ರೀತಿ ಕಂಡು ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಭಾವುಕರಾಗಿದ್ದಾರೆ. ‘ಅಪ್ಪು ಬಾಸ್​ಗೆ ಜೈ’ ಎಂದು ಫ್ಯಾನ್ಸ್​ ಜೈಕಾರ ಕೂಗಿದ್ದಾರೆ.

14 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಜಾಕಿ’ ಸಿನಿಮಾ (Jackie Movie) ಈಗ ಮತ್ತೊಮ್ಮೆ ತೆರೆಕಂಡಿದೆ. ಇಂದು (ಮಾರ್ಚ್​ 15) ‘ಜಾಕಿ’ ಸಿನಿಮಾವನ್ನು ಅಭಿಮಾನಿಗಳು ಮತ್ತೆ ದೊಡ್ಡ ಪರದೆ ಮೇಲೆ ಕಣ್ತುಂಬಿಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಕೂಡ ಸಿನಿಮಾ ನೋಡಲು ಬಂದಿದ್ದಾರೆ. ಈ ವೇಳೆ ‘ಪವರ್​ ಸ್ಟಾರ್​’ಗೆ ಎಲ್ಲರೂ ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ಕಂಡು ಅಶ್ವಿನಿ ಭಾವುಕರಾಗಿದ್ದಾರೆ. ‘ಜಾಕಿ’ ಸಿನಿಮಾ ಪ್ರದರ್ಶನ ಆರಂಭ ಆಗುವಾಗ ಅಶ್ವಿನಿ ಅವರು ಎಮೋಷನಲ್​ ಆಗಿದ್ದು ಕಂಡುಬಂತು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಜನ್ಮದಿನದ ಪ್ರಯುಕ್ತ ‘ಜಾಕಿ’ ಚಿತ್ರವನ್ನು ರೀ-ರಿಲೀಸ್​ ಮಾಡಲಾಗಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More