News9 Global Summit: ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಸಚಿವ ಅಶ್ವಿನಿ ವೈಷ್ಣವ್

|

Updated on: Nov 22, 2024 | 12:25 AM

ಜರ್ಮನಿಯ ಸ್ಟುಟ್​ಗಾರ್ಟ್​ನಲ್ಲಿ ನಡೆಯುತ್ತಿರುವ ಮೂರು ದಿನಗಳ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಭಾತರದ ಸಚಿವ ಅಶ್ವಿನಿ ವೈಷ್ಣವ್ ಭಾಗವಹಿಸಿ ಭಾರತದ ಬೆಳವಣಿಗೆಯಲ್ಲಿ ನಾಲ್ಕು ಪಿಲ್ಲರ್​ಗಳನ್ನು ವಿವರಿಸಿದ್ದಾರೆ.

ಸ್ಟುಟ್​ಗಾರ್ಟ್​(ಜರ್ಮನಿ), (ನವೆಂಬರ್ 21): ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9 ಆಯೋಜಿಸಿರುವ ಮೂರು ದಿನಗಳ ಗ್ಲೋಬಲ್ ಸಮ್ಮಿಟ್ ಇಂದು ಜರ್ಮನಿಯಲ್ಲಿ ಆರಂಭವಾಗಿದೆ. ಬುಂಡೆಸ್ಲೀಗಾ ಕ್ಲಬ್ VfB ಸ್ಟಟ್ ಗಾರ್ಟ್ ಸಹಯೋಗದಲ್ಲಿ ನಡೆಯುತ್ತಿರುವ ನ್ಯೂಸ್ 9 ಗ್ಲೋಬಲ್ ಸಮ್ಮಿಟ್​ನಲ್ಲಿ ಭಾರತದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಿ ಭಾರತದ ಅಭಿವೃದ್ಧಿ ಹಾದಿ ಬಗ್ಗೆ ಬಿಟ್ಟರು. ಅಲ್ಲದೇ ಭಾರತದ ಬೆಳವಣಿಗೆಯಲ್ಲಿ ನಾಲ್ಕು ಪಿಲ್ಲರ್​ಗಳನ್ನು ವಿವರಿಸಿದರು.

ಭಾರತದ ಪ್ರಗತಿಯ ಕಾರ್ಯತಂತ್ರವು ನಾಲ್ಕು ಸ್ತಂಭಗಳ ಮೇಲೆ ನಿಂತಿದೆ. ಮೊದಲನೆಯದು ಇನ್​ಫ್ರಾಸ್ಟ್ರಕ್ಚರ್​ನಲ್ಲಿ ಸಾರ್ವಜನಿಕ ಹೂಡಿಕೆ. ಎರಡನೆಯದು ಸಮಗ್ರ ಪ್ರಗತಿ. ಮೂರನೆಯದು ಮ್ಯಾನುಫ್ಯಾಕ್ಚರಿಂಗ್ ಮತ್ತು ಇನ್ನೋವೇಶನ್. ನಾಲ್ಕನೆಯದು ಕಾನೂನುಗಳ ಸರಳೀಕರಣ ಎಂದು ಹೇಳಿದರು.