AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ

ಮಿತಿಮೀರಿ ನಡೆದುಕೊಂಡ ದರ್ಶನ್ ಅಭಿಮಾನಿಗೆ ಪೊಲೀಸ್ ಅಧಿಕಾರಿಯಿಂದ ಕಪಾಳಮೋಕ್ಷ

ರಾಜೇಶ್ ದುಗ್ಗುಮನೆ
|

Updated on:Feb 16, 2026 | 2:26 PM

Share

Darshan Fans Kirik: ದರ್ಶನ್ ಅಭಿಮಾನಿಗಳು ಕಿರಿಕ್ ಮಾಡಿಕೊಳ್ಳುವುದರಲ್ಲಿ ಸದಾ ಮುಂದಿರುತ್ತಾರೆ ಎಂದರೂ ತಪ್ಪಾಗಲಾರದು. ಒಂದಲ್ಲಾ ಒಂದು ಕಾರಣಕ್ಕೆ ಅವರುಗಳು ಕಿರಿಕ್ ಮಾಡಿಕೊಂಡು ಸುದ್ದಿ ಆಗುತ್ತಾರೆ. ಈಗ ಇವರುಗಳು ಕಿರಿಕ್ ಮಾಡಿಕೊಂಡಿದ್ದಾರೆ. ಇದರಿಂದ ಸಿಟ್ಟಾದ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷವನ್ನೇ ಮಾಡಿದ್ದಾರೆ.

ದರ್ಶನ್ ಅಭಿಮಾನಿಗಳಿಗೆ ಇಂದು (ಫೆಬ್ರವರಿ 16) ವಿಶೇಷ ದಿನ. ಏಕೆಂದರೆ ಅವರ ನೆಚ್ಚಿನ ನಟನ ಜನ್ಮದಿನ. ಈ ವಿಶೇಷ ದಿನಂದು ಬೆಂಗಳೂರಿನ ಆರ್​ಆರ್​ ನಗರದ ಮನೆಗೆ ನುಗ್ಗಲು ದರ್ಶನ್ ಫ್ಯಾನ್ಸ್ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಫ್ಯಾನ್ಸ್ ಮಧ್ಯೆ ಕಿರಿಕ್ ಆಗಿದೆ. ಪೊಲೀಸ್ ಅನ್ನೋದನ್ನು ನೋಡದೆ ತಳ್ಳಿ ಒಳ ನುಗ್ಗಲು ಪ್ರಯತ್ನಿಸಿದ ಅಭಿಮಾನಿಗೆ ಕಪಾಳಮೋಕ್ಷ ಮಾಡಲಾಗಿದೆ. ಕುಡಿದು ಬಂದು ಪದೇ ಪದೇ ಕಿರಿ ಕಿರಿ ಮಾಡಿದ್ದಕ್ಕೆ ಎಎಸ್​​ಐ ಯೋಗ ನರಸಯ್ಯ ರಾಜು ಇಷ್ಟು ಕಠಿಣವಾಗಿ ನಡೆದುಕೊಂಡರು ಎಂದು ತಿಳಿದು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 16, 2026 02:25 PM