IND vs PAK: ‘ದೇಶದ ನಾಯಕರೇ ನಮ್ಮ ಮುಂದಿರುವಾಗ’; ಪ್ರಧಾನಿ ಮೋದಿ ಟ್ವೀಟ್‌ಗೆ ಸೂರ್ಯನ ಪ್ರತಿಕ್ರಿಯೆ
Asia Cup 2025 Final, India Beats Pakistan: ಏಷ್ಯಾಕಪ್ 2025 ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಒಂಬತ್ತನೇ ಬಾರಿಗೆ ಟ್ರೋಫಿ ಗೆದ್ದಿತು. ಈ ಗೆಲುವನ್ನು 'ಆಪರೇಷನ್ ಸಿಂಧೂರ್' ಗೆ ಲಿಂಕ್ ಮಾಡಿ ಪ್ರಧಾನಿ ಮೋದಿ ಅಭಿನಂದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್, ದೇಶದ ನಾಯಕರ ಬೆಂಬಲ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ, ಇದರಿಂದ ತಂಡ ಮುಕ್ತವಾಗಿ ಆಡಲು ಸಾಧ್ಯವಾಗುತ್ತದೆ ಎಂದರು
2025 ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಒಂಬತ್ತನೇ ಬಾರಿಗೆ ಟೂರ್ನಿಯನ್ನು ಗೆದ್ದುಕೊಂಡಿತು. ಇದು ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಹ್ಯಾಟ್ರಿಕ್ ಗೆಲುವಾಗಿತ್ತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಈ ಗೆಲುವನ್ನು ಆಪರೇಷನ್ ಸಿಂಧೂರ್‌ಗೆ ಲಿಂಕ್ ಮಾಡಿ ಭಾರತೀಯ ಕ್ರಿಕೆಟಿಗರನ್ನು ಅಭಿನಂದಿಸಿದ್ದರು. ಇದೀಗ ಮೋದಿ ಅವರ ಹೊಗಳಿಕೆಗೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್, ದೇಶದ ನಾಯಕರೇ ಮುಂದೆ ನಿಂತು ಬ್ಯಾಟಿಂಗ್ ಮಾಡುತ್ತಿರುವುದು ಒಳ್ಳೇಯ ಸಂಗತಿಯಾಗಿದೆ ಎಂದಿದ್ದಾರೆ.
ಟೀಂ ಇಂಡಿಯಾದ ಗೆಲುವಿನ ನಂತರ ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ, ‘ಆಟದ ಮೈದಾನದಲ್ಲಿಯೂ ಆಪರೇಷನ್ ಸಿಂಧೂರ್. ಇಲ್ಲಿಯೂ ಸಹ ಫಲಿತಾಂಶ ಒಂದೇ ಆಗಿದ್ದು, ಭಾರತ ಗೆಲುವು ಸಾಧಿಸಿದೆ. ಇದಕ್ಕಾಗಿ ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದರಿ. ಈಗ, ಪ್ರಧಾನಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್, “ದೇಶದ ನಾಯಕರೇ ಮುಂದೆ ನಿಂತು ಬ್ಯಾಟಿಂಗ್ ಮಾಡುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ಅವರೇ ಸ್ಟ್ರೈಕ್ ತೆಗೆದುಕೊಂಡು ರನ್ ಗಳಿಸುತ್ತಿರುವಂತೆ ಭಾಸವಾಗುತ್ತಿದೆ. ಅದನ್ನು ನೋಡಲು ಅದ್ಭುತವಾಗಿತ್ತು. ಸರ್ ಮುಂದೆ ನಿಂತಾಗ, ಖಂಡಿತವಾಗಿಯೂ ಆಟಗಾರರು ಮುಕ್ತವಾಗಿ ಆಡುತ್ತಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇಡೀ ದೇಶ ಆಚರಿಸುತ್ತಿದೆ. ನಾವು ಭಾರತಕ್ಕೆ ಹಿಂತಿರುಗಿದಾಗ ಸಂಭ್ರಮವನ್ನು ನೋಡಲು ಇನ್ನಷ್ಟು ಚೆನ್ನಾಗಿರುತ್ತದೆ. ಮುಂದೆ ಇದೇ ರೀತಿಯ ಪ್ರದರ್ಶನ ನೀಡಲು ನಮಗೆ ಹೆಚ್ಚಿನ ಸ್ಫೂರ್ತಿ ಮತ್ತು ಪ್ರೇರಣೆ ಸಿಗುತ್ತದೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ