ಏಷ್ಯನ್ ಗೇಮ್ಸ್ನ ಗಾಲ್ಫ್‌ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ ಅರಸ್ಗೆ ಮೈಸೂರಿನಲ್ಲಿ ಅದ್ದೂರಿ ಸ್ವಾಗತ
ಏಷ್ಯನ್ ಗೇಮ್ಸ್ ಗಾಲ್ಫ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಮೈಸೂರಿನ ಪ್ರಣವಿ ಅರಸ್ಗೆ ತವರಿಗೆ ಭವ್ಯ ಸ್ವಾಗತ ನೀಡಲಾಯಿತು. ನಗರದಾದ್ಯಂತ ತೆರೆದ ವಾಹನದಲ್ಲಿ ಸಂಚರಿಸಿದ 'ಚಿನ್ನ'ದ ಹುಡುಗಿಯನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಡೆದ ಸನ್ಮಾನದಲ್ಲಿ ಡೋಲು, ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಮೈಸೂರು, ಅಕ್ಟೋಬರ್ 07: ಏಷ್ಯನ್ ಗೇಮ್ಸ್ನ ಗಾಲ್ಫ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಮೈಸೂರಿನ ಹೆಮ್ಮೆಯ ಕ್ರೀಡಾಪಟು ಪ್ರಣವಿ ಅರಸ್ ಅವರಿಗೆ ತವರಿಗೆ ಅದ್ದೂರಿ ಸ್ವಾಗತ ದೊರೆತಿದೆ. ತಮ್ಮ ಸಾಧನೆಯ ಬಳಿಕ ತಾಯ್ನಾಡಿಗೆ ಮರಳಿದ ಪ್ರಣವಿ ಎಸ್. ಅರಸ್ ಅವರನ್ನು ಮೈಸೂರಿನ ಜನತೆ ಆಪ್ತವಾಗಿ ಬರಮಾಡಿಕೊಂಡಿದ್ದಾರೆ. ಮೈಸೂರು ನಗರದಾದ್ಯಂತ ತೆರೆದ ವಾಹನದಲ್ಲಿ ಪ್ರಣವಿ ಅರಸ್ ಮೆರವಣಿಗೆ ನಡೆಸಲಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಂತು ಅಭಿಮಾನಿಗಳು ಅವರಿಗೆ ಶುಭಾಶಯಕೋರಿದ್ದಾರೆ. ಮೈಸೂರು ನಗರದ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರಣವಿ ಅರಸ್ ಅವರನ್ನು ಸನ್ಮಾನಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 07, 2026 12:52 PM
Loading...
Unable to load recommendations.
Follow Us
