ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಭಾರೀ ಮೆಚ್ಚುಗೆ

|

Updated on: Oct 19, 2024 | 9:36 PM

ರೈಲಿನ ಲೋಕೋ ಪೈಲಟ್‌ನ ಮಾನವೀಯತೆ ಇದೀಗ ಭಾರೀ ಚರ್ಚೆಯಾಗುತ್ತಿದೆ. ಆನೆಗಳ ಹಿಂಡನ್ನು ರೈಲಿಗೆ ಸಿಲುಕದಂತೆ ಅವರು ರಕ್ಷಿಸಿದ್ದಾರೆ. ಕೊಲ್ಕತ್ತಾದಿಂದ ಅಸ್ಸಾಂಗೆ ಹೋಗುತ್ತಿದ್ದ ಕಾಮ್ರೂಪ್ ಎಕ್ಸ್‌ಪ್ರೆಸ್‌ನ ಇಬ್ಬರೂ ಲೋಕೋ ಪೈಲಟ್‌ಗಳು ಜಾಗರೂಕತೆಯಿಂದ ರೈಲ್ವೆ ಹಳಿ ದಾಟುತ್ತಿದ್ದ 60ಕ್ಕೂ ಹೆಚ್ಚು ಕಾಡಾನೆಗಳನ್ನು ರಕ್ಷಿಸಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.

ಕೊಲ್ಕತ್ತಾ: ಲೋಕೋ ಪೈಲಟ್‌ನ ಬುದ್ಧಿವಂತಿಕೆ ಮತ್ತು ಜಾಗರೂಕತೆ ಇಂದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ತಮ್ಮ ಬುದ್ಧಿವಂತಿಕೆಯಿಂದ ರೈಲ್ವೆ ಹಳಿ ದಾಟುತ್ತಿದ್ದ ಆನೆಗಳ ಹಿಂಡನ್ನು ರೈಲಿಗೆ ಸಿಲುಕದಂತೆ ರಕ್ಷಿಸಿದರು. ಅಕ್ಟೋಬರ್ 16ರಂದು ಈ ಘಟನೆ ಸಂಭವಿಸಿದ್ದು, ರೈಲು ಸಂಖ್ಯೆ 15959 ಕಾಮ್ರೂಪ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ 60ಕ್ಕೂ ಹೆಚ್ಚು ಕಾಡಾನೆಗಳನ್ನು ರಕ್ಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on