Chandan Kumar: ನಟ ಚಂದನ್ ಕುಮಾರ್ ಮೇಲೆ ಹಲ್ಲೆ: ವೈರಲ್ ವಿಡಿಯೋದಲ್ಲಿದೆ ಕಪಾಳಮೋಕ್ಷದ ದೃಶ್ಯ
Chandan Kumar Assault: ತೆಲುಗು ಸೀರಿಯಲ್ ತಂತ್ರಜ್ಞರ ಜತೆ ಚಂದನ್ ಅವರು ಗಲಾಟೆ ಮಾಡಿಕೊಂಡರು. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತು.
ತೆಲುಗಿನ ‘ಶ್ರೀಮತಿ ಶ್ರೀನಿವಾಸ್’ (Srimathi Srinivas) ಧಾರಾವಾಹಿ ಶೂಟಿಂಗ್ ವೇಳೆ ಕನ್ನಡದ ನಟ ಚಂದನ್ ಕುಮಾರ್ ಮೇಲೆ ಹಲ್ಲೆ (Assault on Chandan Kumar) ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೆಲುಗು ಧಾರಾವಾಹಿಯಲ್ಲಿ ಚಂದನ್ ಕುಮಾರ್ (Chandan Kumar) ಮುಖ್ಯಭೂಮಿಕೆ ನಿಭಾಯಿಸುತ್ತಿದ್ದರು. ಆ ಸೀರಿಯಲ್ ತಂತ್ರಜ್ಞರ ಜೊತೆ ಅವರು ಕಿರಿಕ್ ಮಾಡಿಕೊಂಡರು. ಮಾತಿಗೆ ಮಾತು ಬೆಳೆದು ಕೈ-ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತು. ಈ ವೇಳೆ ಚಂದನ್ ಕುಮಾರ್ಗೆ ಕಪಾಳಮೋಕ್ಷ ಮಾಡಲಾಗಿದೆ. ಅವರ ಕೆನ್ನೆಗೆ ಹೊಡೆಯುತ್ತಿರುವ ದೃಶ್ಯ ಅಲ್ಲಿದ್ದವರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ.
Published on: Aug 01, 2022 09:59 AM