Asus Zenfone 10: ಗೇಮಿಂಗ್ ಪ್ರಿಯರಿಗಾಗಿ ಮತ್ತೊಂದು ಹೊಸ ಏಸಸ್ ಝೆನ್​ಫೋನ್

|

Updated on: Jun 20, 2023 | 6:44 PM

ಮೊಬೈಲ್ ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಮೊಬೈಲ್​ನೊಂದಿಗೆ ಮತ್ತೆ ಬರುತ್ತಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ರೋಗ್ ಸರಣಿಯ ಒಂದು ಫೋನನ್ನು ಅನಾವರಣ ಮಾಡಿತ್ತು.

ಮೊಬೈಲ್ ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಮೊಬೈಲ್​ನೊಂದಿಗೆ ಮತ್ತೆ ಬರುತ್ತಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ರೋಗ್ ಸರಣಿಯ ಒಂದು ಫೋನನ್ನು ಅನಾವರಣ ಮಾಡಿತ್ತು. ಇದೀಗ ಏಸಸ್ ಜೆನ್‌ಫೋನ್‌ ಸರಣಿಯಲ್ಲಿ ವಿನೂತನ ಫೋನ್‌ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. ಅದುವೇ ಜೆನ್‌ಫೋನ್‌ 10. ನೂತನ ಏಸಸ್‌ ಜೆನ್‌ಫೋನ್‌ 10 ಜೂನ್ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ಫೋನ್ ಬಿಡುಗಡೆಗೂ ಮೊದಲೇ ಟ್ರೆಂಡ್ ಸೃಷ್ಟಿಸಿದೆ.