To mount pressure: ಕೇಂದ್ರ ಆಹಾರ ಸಚಿವ ಪಿಯುಷ್ ಗೋಯೆಲ್ ಜೊತೆ ಕೆಹೆಚ್ ಮುನಿಯಪ್ಪ ನಾಳೆ ಮಾತುಕತೆ
ಸಚಿವರು ಹೇಳುವ ಪ್ರಕಾರ, ಎಫ್ ಸಿಐನಲ್ಲಿ 7 ಲಕ್ಷಟನ್ ಅಕ್ಕಿ ದಾಸ್ತಾನು ಇದ್ದು ರಾಜ್ಯಕ್ಕೆ ಅವಶ್ಯಕತೆ ಇರೋದು 2.28 ಲಕ್ಷ ಟನ್.
ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ಹೊಂದಿಸಲು ರಾಜ್ಯ ಸರ್ಕಾರ ಕಸರತ್ತು ಮುಂದುವರಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅವರಿಗೆ ದೆಹಲಿಗೆ ತೆರಳಿ ಕೇಂದ್ರ ಗ್ರಾಹಕ ಸೇವೆಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿಯುಷ್ ಗೋಯಲ್ (Piyush Goyal) ಭೇಟಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಸೂಚಿಸಿದ್ದು ಸಚಿವರು ನಾಳೆ ದೆಹಲಿಗೆ ಪಯಣಿಸಲಿದ್ದಾರೆ. ಒಡಿಶಾ, ಛತ್ತೀಸ್ ಗಢ್, ತೆಲಂಗಾಣ ಮತ್ತು ಆಂದ್ರಪ್ರದೇಶ ಮೊದಲಾದ ರಾಜ್ಯಗಳೊಂದಿಗೆ ರಾಜ್ಯ ಸರ್ಕಾರದ ಮಾತುಕತೆ ಜಾರಿಯಲ್ಲಿದೆ ಮತ್ತು ದೆಹಲಿ ಪ್ರವಾಸದಲ್ಲಿ ಮುನಿಯಪ್ಪ ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಗಳಾದ ಎನ್ಎಎಫ್ಇಡಿ, ಎನ್ಸಿಸಿಎಫ್, ಮತ್ತು ಕೇಂದ್ರೀಯ ಭಂಡಾರದೊಂದಿಗೆ ಅಕ್ಕಿ ಖರೀದಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ. ಸಚಿವರು ಹೇಳುವ ಪ್ರಕಾರ, ಎಫ್ ಸಿಐನಲ್ಲಿ 7 ಲಕ್ಷಟನ್ ಅಕ್ಕಿ ದಾಸ್ತಾನು ಇದ್ದು ರಾಜ್ಯಕ್ಕೆ ಅವಶ್ಯಕತೆ ಇರೋದು 2.28 ಲಕ್ಷ ಟನ್.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ