ಸಾರಾ ಗೋವಿಂದು ಕಡೆಯವರಿಂದ ನಿರ್ಮಾಪಕ ನರಸಿಂಹ ರಾಜು ಮೇಲೆ ಅಟ್ಯಾಕ್?

|

Updated on: Mar 07, 2025 | 10:54 PM

ಸಾರಾ ಗೋವಿಂದು ಬಣ ಮತ್ತು ನಿರ್ಮಾಪಕ ನರಸಿಂಹ ರಾಜು ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಾರಾ ಗೋವಿಂದು ಬಣದವರು ನರಸಿಂಹ ರಾಜು ಮುಖಕ್ಕೆ ಮಸಿ ಬಳಿದು ಸಾರ್ವಜನಿಕವಾಗಿ ರಸ್ತೆಯಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ನರಸಿಂಹ ರಾಜು ಅವರು ಹೈಗ್ರೌಂಡ್ಸ್ ಪೊಲೀಸ್ ಸ್ಟೇಶನ್​ನಲ್ಲಿ ದೂರು ನೀಡಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಲವು ಸದಸ್ಯರ ನಡುವಿನ ಜಟಾಪಟಿ ಈಗ ಬೀದಿ ರಂಪಾಟ ಆಗುವಂತೆ ಮಾಡಿದೆ. ನಿರ್ಮಾಪಕ ನರಸಿಂಹ ರಾಜು ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಅವರ ಮುಖಕ್ಕೆ ಮಸಿ ಬಳಿಯಲಾಗಿದೆ. ಸಾರಾ ಗೋವಿಂದು (Sa Ra Govindu) ಕಡೆಯವರು ಈ ರೀತಿ ಮಾಡಿದ್ದಾರೆ ಎಂದು ನರಸಿಂಹ ರಾಜು ಆರೋಪಿಸಿದ್ದಾರೆ. ನಂತರ ನರಸಿಂಹ ರಾಜು ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.