Veerappan: ನಿರ್ದೇಶಕ ಎಎಂಆರ್ ರಮೇಶ್ ವರ್ಸಸ್ ವೀರಪ್ಪನ್ ಪತ್ನಿ ಕೇಸ್ ಏನಾಯ್ತು?
Veerappan Wife Muthulakshmi: ‘ಅಟ್ಟಹಾಸ’ ಚಿತ್ರದ ನಿರ್ದೇಶಕ ಎಎಂಆರ್ ರಮೇಶ್ ಮತ್ತು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ನಡುವೆ ಕಾನೂನು ಸಮರ ನಡೆದಿದೆ. ಆ ಬಗ್ಗೆ ತಿಳಿಸಲು ರಮೇಶ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ನಿರ್ದೇಶಕ ಎಎಂಆರ್ ರಮೇಶ್ (AMR Ramesh) ಅವರು ‘ಅಟ್ಟಹಾಸ’ ಸಿನಿಮಾ ಮಾಡುವ ಮೂಲಕ ವೀರಪ್ಪನ್ ಕಥೆಯನ್ನು ತೆರೆಗೆ ತಂದಿದ್ದರು. ಆ ಸಂದರ್ಭದಲ್ಲಿ ವೀರಪ್ಪನ್ (Veerappan) ಪತ್ನಿ ಮುತ್ತುಲಕ್ಷ್ಮಿ ತಕರಾರು ತೆಗೆದಿದ್ದರು. ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಇತ್ತೀಚೆಗೆ ಮತ್ತೆ ಎಎಂಆರ್ ರಮೇಶ್ ವಿರುದ್ಧ ಮುತ್ತುಲಕ್ಷ್ಮಿ ಅವರು ಕೇಸ್ ಹಾಕಿದರು. ಆ ಕುರಿತು ಮಾಹಿತಿ ನೀಡಲು ರಮೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ‘ಅಟ್ಟಹಾಸ’ ಸಿನಿಮಾದಲ್ಲಿ ಹೇಳಲು ಸಾಧ್ಯವಾಗದೇ ಇರುವ ವಿಚಾರವನ್ನು ಮತ್ತೆ ಪ್ರೇಕ್ಷಕರಿಗೆ ಹೇಳಲು ತಯಾರಿ ನಡೆಸಿದಾಗಲೇ ಮುತ್ತುಲಕ್ಷ್ಮಿ (Muthulakshmi) ಕೇಸ್ ಹಾಕಿದ್ದರ ಬಗ್ಗೆ ರಮೇಶ್ ಮಾತನಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 22, 2022 07:08 PM