ಔರಾದ್ ತಹಸೀಲ ಕಚೇರಿಗೆ ಭೇಟಿ ನೀಡಿದ ಶಾಸಕ ಪ್ರಭು ಚೌಹಾನ್ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು!

|

Updated on: Oct 13, 2023 | 6:37 PM

ಬ್ರೋಕರ್​ಗಳಿಗೆ ಕಚೇರಿಯೊಳಗೆ ಪ್ರವೇಶಿಸುವ ಅನುಮತಿ ಯಾಕೆ ನೀಡಲಾಗುತ್ತಿದೆ ಅಂತ ಶಾಸಕ ಅಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸುತ್ತಾರೆ. ಒಬ್ಬ ಮಹಿಳಾ ಅಧಿಕಾರಿ ಬ್ರೋಕರ್ ಗಳಿಗೆ ಪ್ರವೇವಿಲ್ಲ ಅಂತ ಹೊರಗಡೆ ಬೋರ್ಡ್ ತೂಗು ಹಾಕಿರುವುದನ್ನು ಹೇಳುತ್ತಾರೆ.

ಬೀದರ್: ಔರಾದ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಚೌಹಾನ್ (Prabhu Chouhan) ಔರಾದ್ ಪಟ್ಟಣದಲ್ಲಿರುವ ತಹಸೀಲ ಕಚೇರಿಗೆ (Tahasil office) ಭೇಟಿ ನೀಡಿ ರೌದ್ರರೂಪ ಪ್ರದರ್ಶಿಸಿದರು. ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಂತೆ ಇಲ್ಲೂ ಬ್ರೋಕರ್ ಗಳ (brokers) ಹಾವಳಿ ಜಾಸ್ತಿಯಿದೆ. ಚೌಹಾನ್ ಮೊದಲಿಗೆ ಅದೇ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಅವರಿಗೆ ಕಚೇರಿಯೊಳಗೆ ಪ್ರವೇಶಿಸುವ ಅನುಮತಿ ಯಾಕೆ ನೀಡಲಾಗುತ್ತಿದೆ ಅಂತ ಅವರು ಅಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸುತ್ತಾರೆ. ಒಬ್ಬ ಮಹಿಳಾ ಅಧಿಕಾರಿ ಬ್ರೋಕರ್ ಗಳಿಗೆ ಪ್ರವೇವಿಲ್ಲ ಅಂತ ಹೊರಗಡೆ ಬೋರ್ಡ್ ತೂಗು ಹಾಕಿರುವುದನ್ನು ಹೇಳುತ್ತಾರೆ. ಬೋರ್ಡ್ ಹಾಕಿದ ಮಾತ್ರಕ್ಕೆ ಅವರು ಬರದಿರುತ್ತಾರೆಯೇ? ಹಲವಾರು ಕಚೇರಿಗಳಲ್ಲಿ ಬ್ರೋಕರ್ ಅಣತಿಯ ಮೇರೆಗೆ ಕೆಲಸ ನಡೆಯುತ್ತವೆ, ಪೈಲ್ ಗಳು ಮೂವ್ ಆಗುತ್ತವೆ! ಶಾಸಕರು ಎರಡನೆಯದಾಗಿ, ಬಾಕಿ ಉಳಿದಿರುವ ಕೆಲಸಗಳ ಪರಿಶೀಲನೆ ನಡೆಸಿ ಯಾಕೆ ಹಲವಾರು ದಿನಗಳಿಂದ ಫೈಲ್ ಗಳು ಮೂವ್ ಆಗದೆ ಕುಳಿತಿವೆ ಎಂದು ಕೇಳಿದರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ