ಕೊಪ್ಪಳ: ಕ್ಷುಲ್ಲಕ ವಿಚಾರಕ್ಕೆ ಗ್ರಾಮ ಪಂಚಾಯತಿ ಪಿಡಿಒ ಮೇಲೆ ಹಲ್ಲೆ; ವಿಡಿಯೋ ವೈರಲ್​

ಕೊಪ್ಪಳ: ಕ್ಷುಲ್ಲಕ ವಿಚಾರಕ್ಕೆ ಗ್ರಾಮ ಪಂಚಾಯತಿ ಪಿಡಿಒ ಮೇಲೆ ಹಲ್ಲೆ; ವಿಡಿಯೋ ವೈರಲ್​

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2023 | 5:18 PM

ನಿವೇಶನದ ದಾಖಲೆ ಒದಗಿಸಲು ಗ್ರಾಮ ಪಂಚಾಯತಿಗೆ ಮರಿಸ್ವಾಮಿ ಅರ್ಜಿ ಸಲ್ಲಿಸಿದ್ದ. ಆದರೆ, ಪಿಡಿಒ ಹನುಮಂತಪ್ಪ ದಾಖಲೆ ನೀಡಲು ವಿಳಂಬ ಮಾಡಿದ್ದರು. ಈ ಕುರಿತು ವಿಚಾರಿಸಲು ಬಂದಾಗ ಪಿಡಿಒ ಹಾಗೂ ಮರಿಸ್ವಾಮಿ ನಡುವೆ  ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೊಚ್ಚಿಗೆದ್ದ ಮರಿಸ್ವಾಮಿ, ಹನುಮಂತಪ್ಪ ಮೇಲೆ ಹಲ್ಲೆ ಮಾಡಿದ್ದಾನೆ.

ಕೊಪ್ಪಳ, ಅ.13: ಕ್ಷುಲ್ಲಕ ವಿಚಾರಕ್ಕೆ ಗ್ರಾಮ ಪಂಚಾಯತಿ ಪಿಡಿಒ(PDO) ಮೇಲೆ ಹಲ್ಲೆ ಮಾಡಿದ ಘಟನೆ ಕೊಪ್ಪಳ (Koppala) ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ನಡೆದಿದೆ.  ಪಿಡಿಒ ಹನುಮಂತಪ್ಪ ನಾಯಕ್ ಎಂಬುವವರ ಮೇಲೆ ಮರಿಸ್ವಾಮಿ ಎಂಬಾತ ಹಲ್ಲೆ ಮಾಡಿದ್ದಾನೆ. ನಿವೇಶನದ ದಾಖಲೆ ಒದಗಿಸಲು ಗ್ರಾಮ ಪಂಚಾಯತಿಗೆ ಮರಿಸ್ವಾಮಿ ಅರ್ಜಿ ಸಲ್ಲಿಸಿದ್ದ. ಆದರೆ, ಪಿಡಿಒ ಹನುಮಂತಪ್ಪ ದಾಖಲೆ ನೀಡಲು ವಿಳಂಬ ಮಾಡಿದ್ದರು. ಈ ಕುರಿತು ವಿಚಾರಿಸಲು ಬಂದಾಗ ಪಿಡಿಒ ಹಾಗೂ ಮರಿಸ್ವಾಮಿ ನಡುವೆ  ಮಾತಿನ ಚಕಮಕಿ ನಡೆದಿದೆ. ಈ ವೇಳೆ ರೊಚ್ಚಿಗೆದ್ದ ಮರಿಸ್ವಾಮಿ, ಹನುಮಂತಪ್ಪ ಮೇಲೆ ಹಲ್ಲೆ ಮಾಡಿದ್ದಾನೆ. ಇದೀಗ ಪಿಡಿಒ ಮೇಲೆ ಹಲ್ಲೆ ನಡೆಸಿದ ಮರಿಸ್ವಾಮಿ ವಿರುದ್ಧ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ