ಮಾಸ್ಕ್ ಧರಿಸದೇ ಕ್ರಿಕೆಟ್ ಆಡುತ್ತಿದ್ದವರ ಫೋಟೊ ತೆಗೆಯಲು ಯತ್ನಿಸಿದ ಪಿಡಿಒ ಮೇಲೆ ಹಲ್ಲೆ
ಬದ್ರಿಯಾನಗರ ಮೈದಾನದಲ್ಲಿ ಮಾಸ್ಕ್ ಹಾಕದೆ ಆಟವಾಡುತ್ತಿದ್ದವರನ್ನು ಗಮನಿಸಿದ ಪಿಡಿಒ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸದಿದ್ದನ್ನು ಪ್ರಶ್ನಿಸಿದ್ದಾರೆ. ಬದ್ರಿಯಾನಗರ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕುವಂತೆ ಸೂಚಿಸಿದ್ದಾರೆ.
ಮಂಗಳೂರು: ಮಾಸ್ಕ್ ಧರಿಸದೇ ಕ್ರಿಕೆಟ್ ಆಡುತ್ತಿದ್ದವರನ್ನು ಪ್ರಶ್ನಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೋರ್ವರ ಮೇಲೆ ಇಬ್ಬರು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಬದ್ರಿಯಾನಗರದಲ್ಲಿ ನಡೆದಿದೆ. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಪಿಡಿಒ ರಾಜೇಂದ್ರ ಶೆಟ್ಟಿ ಅವರ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ.
ಬದ್ರಿಯಾನಗರ ಮೈದಾನದಲ್ಲಿ ಮಾಸ್ಕ್ ಹಾಕದೆ ಆಟವಾಡುತ್ತಿದ್ದವರನ್ನು ಗಮನಿಸಿದ ಪಿಡಿಒ ರಾಜೇಂದ್ರ ಶೆಟ್ಟಿ ಮಾಸ್ಕ್ ಧರಿಸದಿದ್ದನ್ನು ಪ್ರಶ್ನಿಸಿದ್ದಾರೆ. ಬದ್ರಿಯಾನಗರ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕುವಂತೆ ಸೂಚಿಸಿದ್ದಾರೆ. ಮಾಸ್ಕ್ ಹಾಕದೇ ಗುಂಪು ಸೇರಿದ್ದನ್ನು ಪ್ರಶ್ನಿಸಿ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆಯಲು ಮುಂದಾಗಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಕ್ರಿಕೆಟ್ ಆಡುತ್ತಿದ್ದವರ ಇಬ್ಬರು ಪುದುಗ್ರಾಮದ ಕುಂಪಲ ಮಜಲು ನಿವಾಸಿಗಳು ಪಿಡಿಒ ರಾಜೇಂದ್ರ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊವಿಡ್ ವಾರಿಯರ್ಸ್ ಮೇಲೆ ಹಲ್ಲೆಗೆ ಕಠಿಣ ಶಿಕ್ಷೆ ಕೊವಿಡ್ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. 5 ವರ್ಷ ಜೈಲು, 1 ಲಕ್ಷ ರೂಪಾಯಿ ದಂಡ ವಿಧಿಸುತ್ತೇವೆ. ಯಾರೂ ಸಹ ವಾರಿಯರ್ಸ್ ಮೇಲೆ ಹಲ್ಲೆ ಮಾಡಬಾರದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನಿನ್ನೆ (ಮೇ 24) ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕೆಲ ತಜ್ಞ ವೈದ್ಯರು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ಮುಂದೆ ವೈದ್ಯರ ಕೆಲಸದ ಪಾಳಿಯನ್ನು ನಮಗೆ ಕಳುಹಿಸಿಕೊಡಬೇಕು. ನಾನು ಭೇಟಿ ನೀಡಿದ್ದ 12 ಜಿಲ್ಲೆಗಳಲ್ಲಿ ಚಿಕಿತ್ಸೆಗೆ ವೈದ್ಯರು ಹಿಂದೇಟು ಹಾಕಿರುವ ಕುರಿತು ದೂರುಗಳು ಕೇಳಿಬಂದಿದೆ. ಕಿರಿಯ ವೈದ್ಯರಿಂದ ಕೆಲಸ ಮಾಡಿಸಿ ಹಿರಿಯ ವೈದ್ಯರು ಗೈರು ಹಾಜರಾಗುತ್ತಿದ್ದಾರೆ ಎಂದು ಡಾ.ಕೆ. ಸುಧಾಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೊವಿಡ್ನಿಂದ ಸಾಯುವ ಭಯ ಇದೆ ಎಂದು ನಿರೀಕ್ಷಣಾ ಜಾಮೀನು ನೀಡಬಾರದು: ಸುಪ್ರೀಂಕೋರ್ಟ್
ಸೋಂಕಿತರು ಹೋಂ ಕ್ವಾರಂಟೈನ್ ಆಗುವಂತಿಲ್ಲ, ಕೊವಿಡ್ ಕೇರ್ ಸೆಂಟರ್ಗೆ ದಾಖಲಾಗಲೇಬೇಕು: ಮಹಾರಾಷ್ಟ್ರದಲ್ಲಿ ನೂತನ ನಿಯಮ
(Assault on PDO attempting to remove photos of cricketers playing mask without wearing mask in Mangaluru)