ಚಾರ್ಮಾಡಿ ಬಳಿ ರೋಚಕ ಕಾರ್ಯಾಚರಣೆ; ಮೃತ್ಯುಂಜಯ ನದಿಯಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಪಿಕಪ್ ವಾಹನವನ್ನು ರಕ್ಷಿಸಿದ ಸ್ಥಳೀಯರು

ಎದೆಗುಂದದೇ ಕಾರ್ಯಾಚರಣೆ ನಡೆಸಿ ಸ್ಥಳೀಯ ಯುವಕರು ಪಿಕಪ್ ವಾಹನದ ಚಾಲಕ ಮತ್ತು ಕ್ಲೀನರ್​ರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಚಾರ್ಮಾಡಿ ಬಳಿ ರೋಚಕ ಕಾರ್ಯಾಚರಣೆ; ಮೃತ್ಯುಂಜಯ ನದಿಯಲ್ಲಿ ಕೊಚ್ಚಿಕೊಂಡು ಹೋಗಲಿದ್ದ ಪಿಕಪ್ ವಾಹನವನ್ನು ರಕ್ಷಿಸಿದ ಸ್ಥಳೀಯರು
ನದಿಯಲ್ಲಿ ತೇಲಿಹೋಗುವ ಅಪಾಯದಲ್ಲಿದ್ದ ಪಿಕಪ್ ವಾಹನವನ್ನು ರಕ್ಷಿಸುತ್ತಿರುವ ಯುವಕರು
Follow us
guruganesh bhat
|

Updated on:May 25, 2021 | 9:19 PM

ಮಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪ್ರಮುಖ ಮೃತ್ಯುಂಜಯ ನದಿಯ ಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಚಿಬಿದ್ರೆಯ ಬಳಿ ಮೃತ್ಯುಂಜಯ ನದಿ ಹರಿವಿನಲ್ಲಿ ಸಿಕ್ಕಿಬಿದ್ದ ಪಿಕಪ್ ವಾಹನವೊಂದು ಮುಳುಗಡೆಯಾಗುವದರಲ್ಲಿತ್ತು. ಪಿಕಪ್ ವಾಹನ ಕೊಚ್ಚಿಹೋಗದಂತೆ ವಾಹನಕ್ಕೆ ಹಗ್ಗ ಕಟ್ಟಿ ಚಾಲಕ ಮತ್ತು ಕ್ಲೀನರ್​ರನ್ನು​ ಸ್ಥಳೀಯರು ಕಾರ್ಯಾಚರಣೆ ನಡೆಸಿ ರಕ್ಷಿಸಿದ ರೋಚಕ ಘಟನೆ ನಡೆದಿದೆ. ಎದೆಗುಂದದೇ ಕಾರ್ಯಾಚರಣೆ ನಡೆಸಿ ಸ್ಥಳೀಯ ಯುವಕರು ಪಿಕಪ್ ವಾಹನದ ಚಾಲಕ ಮತ್ತು ಕ್ಲೀನರ್​ರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಯಾಸ್ ಚಂಡಮಾರುತದ ಪರಿಣಾಮ ಮೇ 25ರಿಂದ ಮೇ 29ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಜತೆಗೆ ಕರ್ನಾಟಕದ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

ಈಗಾಗಲೇ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ದಾವಣಗೆರೆ 7 ಸೆಂ.ಮೀ, ಉತ್ತರ ಕನ್ನಡ 6 ಸೆಂ.ಮೀ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 5.ಸೆಂ.ಮೀ ಮಳೆಯಾಗಿದೆ. ಯಾಸ್ ಚಂಡಮಾರುತದ ಪರಿಣಾಮ ಬಂಗಾಳ ಕೊಲ್ಲಿಯಲ್ಲಿ ‌ಪ್ರಬಲ ಚಂಡಮಾರುತ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಯಾಸ್ ಚಂಡಮಾರುತದ ಪರಿಣಾಮದಿಂದ ಮೇ 25 ರಿಂದ 29 ರ ವರೆಗೆ ಕರಾವಳಿ ಜಿಲ್ಲೆ ವ್ಯಾಪಕ ಮಳೆಯಾಗಲಿದೆ. ಚಂಡಮಾರುತ ಮೇ 26 ರಂದು ಓರಿಸ್ಸಾ ಮತ್ತು ಪಶ್ವಿಮ ಬಂಗಾಳದ ಕರಾವಳಿ‌ ತಲುಪಲಿದೆ ಎಂದು ಅವರು ತಿಳಿಸಿದರು.

ಯಾಸ್ ತೀವ್ರತೆಗೆ ಬಂಗಾಳಕೊಲ್ಲಿಯಲ್ಲಿ ಸಾಗರ ಮತ್ತು ವಾಯುಮಂಡಲದ ಪರಿಸ್ಥಿತಿಗಳು ಅತ್ಯಂತ ಅನುಕೂಲಕರವಾಗಿದ್ದರೂ, ಯಾಸ್ ಕರಾವಳಿಗೆ ತುಲನಾತ್ಮಕವಾಗಿ ಹತ್ತಿರದಲ್ಲಿದೆ. ಅಸಾಮಾನ್ಯವಾಗಿ ಬೆಚ್ಚಗಿನ ಸಮುದ್ರದ ಮೇಲೆ ಕಡಿಮೆ ಸಮಯವನ್ನು ಹೊಂದಿರುವುದರಿಂದ ಇದು ಅತ್ಯಂತ ತೀವ್ರವಾದ ಚಂಡಮಾರುತಕ್ಕೆ ತೀವ್ರವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಪ್ಪಳಿಸುವ ಸಮಯದಲ್ಲಿ, ಗಾಳಿಯ ವೇಗವು 155 ರಿಂದ 165 ಕಿ.ಮೀ ವೇಗದಿಂದ 185 ಕಿ.ಮೀ ವೇಗದಲ್ಲಿರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಯಾಸ್ ತೀವ್ರಗೊಂಡ ನಂತರ ಅದರ ಸಮುದ್ರ ಪ್ರಯಾಣವು ವೇಗವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ, ಅದಕ್ಕಾಗಿಯೇ ಭೂಕುಸಿತದ ಸಮಯವನ್ನು ಮುಂದುವರೆಸಲಾಗಿದೆ ಎಂದು ಐಎಮ್‌ಡಿಯ ಚಂಡಮಾರುತಗಳ ಉಸ್ತುವಾರಿ ಸುನೀತಾ ದೇವಿ ಹೇಳಿದರು.

ಇದನ್ನೂ ಓದಿ: ಕೊವಿಡ್​ನಿಂದ ಸಾಯುವ ಭಯ ಇದೆ ಎಂದು ನಿರೀಕ್ಷಣಾ ಜಾಮೀನು ನೀಡಬಾರದು: ಸುಪ್ರೀಂಕೋರ್ಟ್

DIKSHA App: ಪಿಯು,ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಒಳ್ಳೆ ಸುದ್ದಿ: ಮುಂಬರುವ ಪರೀಕ್ಷೆಗಳಿಗೆ ಸಿದ್ಧವಾಗಲು ದೀಕ್ಷಾ ಆ್ಯಪ್ ಲೋಕಾರ್ಪಣೆ

(Exciting operation near Charmady Mangaluru Locals rescued a pickup vehicle washed up on the river Mrutyunjaya)

Published On - 9:05 pm, Tue, 25 May 21