AUS vs SA: ಸುಲಭ ಕ್ಯಾಚ್ ಕೈಚೆಲ್ಲಿದ ಸ್ಟಬ್ಸ್, ಸಿಕ್ಸರ್‌ಗಳ ಮಳೆಗರೆದ ಆರ್ಸಿಬಿ ಬ್ಯಾಟರ್; ವಿಡಿಯೋ ನೋಡಿ
Tim David's Blitz: ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 178 ರನ್ ಗಳಿಸಿತು. ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಟಿಮ್ ಡೇವಿಡ್ 83 ರನ್‌ಗಳ ಇನ್ನಿಂಗ್ಸ್ ಆಡಿದರು. ಇದರಲ್ಲಿ 8 ಸಿಕ್ಸರ್‌ಗಳು ಸೇರಿವೆ. 16ನೇ ಓವರ್‌ನಲ್ಲಿ ಕ್ಯಾಚ್ ಡ್ರಾಪ್ ಆದ ನಂತರ ಡೇವಿಡ್ ಬ್ಯಾಕ್-ಟು-ಬ್ಯಾಕ್ ಸಿಕ್ಸರ್‌ಗಳನ್ನು ಹೊಡೆದರು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯ ಡಾರ್ವಿನ್ನ ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 178 ರನ್ ಕಲೆಹಾಕಿದೆ. ತಂಡದ ಪರ ಅಬ್ಬರಿಸಿದ ಟಿಮ್ ಡೇವಿಡ್ ಕೇವಲ 52 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಹಾಯದಿಂದ ಬರೋಬ್ಬರಿ 83 ರನ್ ಬಾರಿಸಿದರು.
ಅದರಲ್ಲೂ 16ನೇ ಓವರ್‌ನಲ್ಲಿ ಸಿಕ್ಕ ಜೀವದಾನದ ಲಾಭ ಪಡೆದ ಡೇವಿಡ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ವಾಸ್ತವವಾಗಿ ಆಫ್ರಿಕಾ ಪರ 16ನೇ ಓವರ್ ಬೌಲ್ ಮಾಡಿದ ಮುತ್ತುಸ್ವಾಮಿ, ಡೇವಿಡ್ ಅವರ ವಿಕೆಟ್ ಪಡೆಯುವ ಅವಕಾಶ ಹೊಂದಿದ್ದರು. ಈ ಓವರ್ನ ಮೂರನೇ ಎಸೆತವನ್ನು ಡೇವಿಡ್ ಸಿಕ್ಸರ್ಗಟ್ಟಲು ಪ್ರಯತ್ನಿಸಿದರು. ಆದರೆ ಚೆಂಡು ಮೇಲೆ ಗಾಳಿಯಲ್ಲಿ ಹೋಯಿತು. ಈ ವೇಳೆ ಟ್ರಿಸ್ಟಾನ್ ಸ್ಟಬ್ಸ್ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಅನ್ನು ಕೈಚೆಲ್ಲಿದರು. ಈ ಹಂತದಲ್ಲಿ 56 ರನ್ ಬಾರಿಸಿ ಆಡುತ್ತಿದ್ದ ಡೇವಿಡ್, ಆ ಬಳಿಕ 83 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು.

