ಉಡುಪಿ: ಕೆಂಡ ಹಾಯುವಾಗ ಆಯತಪ್ಪಿ ನಿಗಿನಿಗಿ ಕೆಂಡಗಳ ಮೇಲೆ ಬಿದ್ದ ಅಯ್ಯಪ್ಪ ಮಾಲೆಧಾರಿ, ಆಸ್ಪತ್ರೆಗೆ ದಾಖಲು
ಮಾಲೆಧಾರಿ ಭಕ್ತ ಬಿದ್ದಕೂಡಲೇ ಅಲ್ಲಿದ್ದ ಜನ ಅವರ ನೆರವಿಗೆ ಧಾವಿಸಿದ್ದಾರೆ ಮತ್ತು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕರಾವಳಿ ಪ್ರದೇಶದಲ್ಲಿ ಅಯ್ಯಪ್ಪ ಮಾಲೆಧಾರಿಗಳು ಕೆಂಡಸೇವೆಯಲ್ಲಿ ಭಾಗಿಯಾಗುವುದು ಸಾಂಪ್ರದಾಯಿಕ ವಾಡಿಕೆಯಾಗಿದೆ.
ಉಡುಪಿ: ಕೆಂಡ ಹಾಯುವುದು ಒಂದು ಧಾರ್ಮಿಕ ಸಂಪ್ರದಾಯವಾಗಿರುವುದರಿಂದ (religious custom) ಅದರ ಬಗ್ಗೆ ನೆಗೆಟಿವ್ ಧೋರಣೆಯಲ್ಲಿ ಮಾತಾಡೋದು ಅಸಂಮಜಸ ಅನಿಸುತ್ತದೆ ಮತ್ತು ವಿವಾದಕ್ಕೂ ಕಾರಣವಾಗಬಹುದು. ಆದರೆ ಕೆಂಡ ಸೇವೆ ನಡೆಯುವಾಗ ಅವಘಡಗಳು ಸಂಭವಿಸುವುದು ಮಮೂಲು ಅನ್ನುವಷ್ಟು ಸಾಮಾನ್ಯವಾಗಿಬಿಟ್ಟಿದೆ. ಉಡುಪಿಯ ಮಲ್ಪೆ ಅಯ್ಯಪ್ಪ ಮಂದಿರದ (Ayyappa temple ) ವಾರ್ಷಿಕೋತ್ಸವದ ಅಂಗವಾಗಿ ನಡೆದ ಕೆಂಡಸೇವೆಯಲ್ಲಿ ಅಯ್ಯಪ್ಪ ಮಾಲೆಧಾರಿಯೊಬ್ಬರು (Ayyappa devotee) ಕೆಂಡಹಾಯುವಾಗ ಆಯ ತಪ್ಪಿ ನಿಗಿನಿಗಿ ಕೆಂಡಗಳಲ್ಲಿ ಬೀಳುವ ದೃಶ್ಯ ಭಯಾನಕವಾಗಿದೆ. ಇಲ್ಲಿ ಮಾಲೆಧಾರಿಗಳು ಕೆಂಡಗಳ ಮೇಲೆ ಒಂದು ಬದಿಯಿಂದ ಮತ್ತೊಂದು ಬದಿಗೆ ಓಡುತ್ತಿಲ್ಲ. ಬದಲಿಗೆ ಕೆಂಡಗಳ ಮೇಲೆ ಕುಪ್ಪಳಿಸುತ್ತಾ ಮುಂದೆ ಸಾಗುತ್ತಾರೆ. ಮಾಲೆಧಾರಿ ಭಕ್ತ ಬಿದ್ದಕೂಡಲೇ ಅಲ್ಲಿದ್ದ ಜನ ಅವರ ನೆರವಿಗೆ ಧಾವಿಸಿದ್ದಾರೆ ಮತ್ತು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕರಾವಳಿ ಪ್ರದೇಶದಲ್ಲಿ ಅಯ್ಯಪ್ಪ ಮಾಲೆಧಾರಿಗಳು ಕೆಂಡಸೇವೆಯಲ್ಲಿ ಭಾಗಿಯಾಗುವುದು ಸಾಂಪ್ರದಾಯಿಕ ವಾಡಿಕೆಯಾಗಿದೆ. ಕೆಂಡದ ಬಳಿಯಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಭೀತಿ ಹುಟ್ಟಿಸುವ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ