ಈ ಜಾತ್ರೆಯಲ್ಲಿ ಅರ್ಚಕರು ಮೈಮೇಲೆ ನಿಗಿನಿಗಿ ಕೆಂಡಗಳನ್ನು ಸುರಿದುಕೊಳ್ಳುತ್ತಾರೆ, ಭಕ್ತರು ಕೊಂಡದಲ್ಲಿ ಧುಮುಕುತ್ತಾರೆ!
ಉರುಕಾತಮ್ಮನಿಗೆ ಪೂಜೆ ಸಲ್ಲಿಸಿದ ಬಳಿಕ ಅರ್ಚಕರು ಏನು ಮಾಡುತ್ತಾರೆ ಅಂತ ಗಮನಿಸಿ ಮಾರಾಯ್ರೇ. ಒಂದು ಮೊರದಲ್ಲಿ ಕೆಂಡಗಳನ್ನು ತುಂಬಿಕೊಂಡು ಮೈಮೇಲೆ ಸುರಿದುಕೊಳ್ಳುತ್ತಾರೆ!! ಆಮೇಲೆ ಸುಮಾರು ಜನ ಆವೇಷಕ್ಕೊಳಗಾದವರಂತೆ ಕೊಂಡ ಹಾಯಲಾರಂಭಿಸುತ್ತಾರೆ.
ರಾಜ್ಯದಾದ್ಯಂತ ಜಾತ್ರೆಗಳು (temple fairs) ನಡೆಯುತ್ತಿವೆ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗಗಳ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜಾತ್ರೆಗಳನ್ನು ಕುರಿತು ನಾವು ವರದಿ ಮಾಡುತ್ತಿದ್ದೇವೆ ಮತ್ತು ವಿಡಿಯೋಗಳನ್ನು ಸಹ ತೋರಿಸುತ್ತಿದ್ದೇವೆ. ಶುಕ್ರವಾರ ನಿಮಗೆ ಸಿದ್ದರಾಮನ ಹುಂಡಿಯಲ್ಲಿ (Siddaramana Hundi) ಸಿದ್ದರಾಮೇಶ್ವರ ಜಾತ್ರೆ ತೋರಿಸಿದೆವು. ಎಲ್ಲ ವಿಡಿಯೋಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದರು ಅನ್ನೋದು ಬೇರೆ ವಿಷಯ ಮಾರಾಯ್ರೇ. ಅವರು ಜಾತ್ರೆಯಲ್ಲಿ ವೀರಗಾಸೆ ಕುಣಿತ ಮಾಡಿದ ವಿಡಿಯೋವನ್ನು ನಿಮಗೆ ತೋರಿಸಿದೆವು. ಓಕೆ, ನಾವಿಲ್ಲಿ ಚಾಮರಾಜನಗರ ತಾಲ್ಲೂಕಿನ ತೆಳ್ಳನೂರ ಗ್ರಾಮದಲ್ಲಿ ನಡೆದ ಉರುಕಾತಮ್ಮ ಜಾತ್ರೆಯ ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ.
ಪ್ರತಿ ಜಾತ್ರೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಉರುಕಾತಮ್ಮ ಜಾತ್ರೆಯ ವಿಶೇಷತೆ ನಿಮಗೆ ವಿಡಿಯೋನಲ್ಲಿ ಕಾಣುತ್ತದೆ. ಉರುಕಾತಮ್ಮ ಜಾತ್ರೆಗೆ ಬಂದವರೆಲ್ ಒಂದು ಬಯಲು ಪ್ರದೇಶದಲ್ಲಿ ಜಮಾವಣೆಗೊಂಡಿದ್ದಾರೆ. ಸುತ್ತಲೂ ಹಸಿರಿನಿಂದ ತುಂಬಿರುವ ಹೊಲಗದ್ದೆಗಳಿವೆ. ಒಂದು ಕಡೆ ಅಗ್ನಿಕುಂಡವಿದೆ ಮತ್ತು ಅದರಲ್ಲಿ ನಿಗಿನಿಗಿ ಕೆಂಡಗಳು!
ಉರುಕಾತಮ್ಮನಿಗೆ ಪೂಜೆ ಸಲ್ಲಿಸಿದ ಬಳಿಕ ಅರ್ಚಕರು ಏನು ಮಾಡುತ್ತಾರೆ ಅಂತ ಗಮನಿಸಿ ಮಾರಾಯ್ರೇ. ಒಂದು ಮೊರದಲ್ಲಿ ಕೆಂಡಗಳನ್ನು ತುಂಬಿಕೊಂಡು ಮೈಮೇಲೆ ಸುರಿದುಕೊಳ್ಳುತ್ತಾರೆ!! ಆಮೇಲೆ ಸುಮಾರು ಜನ ಆವೇಷಕ್ಕೊಳಗಾದವರಂತೆ ಕೊಂಡ ಹಾಯಲಾರಂಭಿಸುತ್ತಾರೆ. ಒಬ್ಬರಾದ ಮೇಲೆ ಒಬ್ಬರು ಅಗ್ನಿಕುಂಡದಲ್ಲಿ ಧುಮುಕುತ್ತಾರೆ ಮತ್ತು ಆಚೆ ಬರುತ್ತಾರೆ. ಅರ್ಚಕರು ಸೇರಿದಂತೆ ಯಾರಿಗೂ ಸುಟ್ಟ ಗಾಯವಾಗಲ್ಲ.
ಕೊಂಡ ಹಾಯುವುದು ಬೇರೆ ಕಡೆಗಳಲ್ಲೂ ನಡೆಯುತ್ತದೆ ಆದರೆ ಅರ್ಚಕರು ಮೈ ಮೇಲೆ ಕೆಂಡು ಸುರಿದುಕೊಳ್ಳುವುದು ಇಲ್ಲಿ ಮಾತ್ರ ಇರಬೇಕೆನೋ.
ಇದನ್ನೂ ಓದಿ: ಜಾತ್ರೆಯಲ್ಲಿ ಮಾವ ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡರು ಅವರ ಹಿರಿಸೊಸೆ ಸ್ಮಿತಾ ರಾಕೇಶ್