ಜಾತ್ರೆಯಲ್ಲಿ ಮಾವ ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡರು ಅವರ ಹಿರಿಸೊಸೆ ಸ್ಮಿತಾ ರಾಕೇಶ್

ಜಾತ್ರೆಯಲ್ಲಿ ಮಾವ ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡರು ಅವರ ಹಿರಿಸೊಸೆ ಸ್ಮಿತಾ ರಾಕೇಶ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 26, 2022 | 12:48 AM

ಆದರೆ ಸಿದ್ದರಾಮಯ್ಯನವರ ಸಂದಿಗ್ಧತೆ ನೋಡಿ. ಕುಟುಂಬದವರ ಜೊತೆ ದೇವರ ದರ್ಶನಕ್ಕೆ ಬಂದರೂ ಜನ ಅವರು ಸುತ್ತ ಮುಕ್ಕುರಿದ್ದಾರೆ. ಕೆಲವರು ಅಭಿಮಾನದಿಂದ ಹತ್ತಿರಕ್ಕೆ ಬಂದರೆ, ಬೇರೆ ಕೆಲವರಿಗೆ ಗಣ್ಯರೊಂದಿಗೆ ಕಾಣಿಸಿಕೊಳ್ಳುವ ಖಯಾಲಿ.

ಸಿದ್ದರಾಮಯ್ಯನವರ (Siddaramaiah) ಪತ್ನಿ ಪಾರ್ವತಿ ಅವರಾಗಲೀ, ಅವರ ಸೊಸೆಯಿಂದರಾಗಲೀ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ನಿಮಗೆ ನೆನಪಿರಬಹುದು 2018 ರ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಹಿರಿಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ (late Rakesh Siddaramaiah) ಅವರ ಪತ್ನಿ ಸ್ಮಿತಾ ಅವರು ಮಾವನ ಪರವಾಗಿ ಮತಯಾಚಿಸಿದ್ದರು. ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ (Siddarameshwara temple fair) ನಡೆಯುತ್ತಿದೆ. ಪ್ರತಿವರ್ಷದಂತೆ ಈ ಸಲವೂ ಸಿದ್ದರಾಮಯ್ಯನವರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅವರೊಂದಿಗೆ ಸ್ಮಿತಾ ಅವರು ಕೂಡ ಜಾತ್ರೆಗೆ ಅಗಮಿಸಿದ್ದರು. ಮಾಜಿ ಮುಖ್ಯಮಂತ್ರಿಗಳು ಆರತಿಗಾಗಿ ಸಿದ್ದರಾಮೇಶ್ವರ ದೇವಸ್ಥಾನದೊಳಗೆ ಹೋದಾಗ ಸ್ಮಿತಾ ಅವರು ಸಹ ಹಿಂಬಾಲಿಸಿದರು. ಅವರೊಂದಿಗೆ ಬೇರೆ ಮಹಿಳೆಯರೂ ಇದ್ದಾರೆ ಯಾರೆಂದು ವಿಡಿಯೋನಲ್ಲಿ ಗೊತ್ತಾಗದು.

ರಾಜಕಾರಣಿಗಳು ಯಾವಾಗಲೂ ಸಾರ್ವಜನಿಕ ಬದುಕಿನಲ್ಲಿರುವುದರಿಂದ ಖಾಸಗಿ ಬದುಕಿಗೆ ಹೆಚ್ಚು ಸಮಯ ನೀಡಲಾಗದು ಅನಿಸುತ್ತದೆ ಮಾರಾಯ್ರೇ. ಇಲ್ಲಿ ಈ ವಿಡಿಯೋನಲ್ಲಿ ನೋಡಿ. ಸಿದ್ದರಾಮಯ್ಯನವರು ತಮ್ಮ ಕುಟುಂಬದೊಂದಿಗೆ ಬಂದಿದ್ದಾರೆ. ಜಾತ್ರೆ ಒಂದು ವಿಶೇಷ ಸಂದರ್ಭ, ಕುಟುಂಬವೊಂದರ ಸದಸ್ಯರು ಬೇರೆ ಬೇರೆ ಊರುಗಳಲ್ಲಿದ್ದರೂ ಜಾತ್ರೆಗಾಗಿ ಊರಲ್ಲಿ ಒಟ್ಟಿಗೆ ಸೇರುತ್ತಾರೆ.

ಆದರೆ ಸಿದ್ದರಾಮಯ್ಯನವರ ಸಂದಿಗ್ಧತೆ ನೋಡಿ. ಕುಟುಂಬದವರ ಜೊತೆ ದೇವರ ದರ್ಶನಕ್ಕೆ ಬಂದರೂ ಜನ ಅವರು ಸುತ್ತ ಮುಕ್ಕುರಿದ್ದಾರೆ. ಕೆಲವರು ಅಭಿಮಾನದಿಂದ ಹತ್ತಿರಕ್ಕೆ ಬಂದರೆ, ಬೇರೆ ಕೆಲವರಿಗೆ ಗಣ್ಯರೊಂದಿಗೆ ಕಾಣಿಸಿಕೊಳ್ಳುವ ಖಯಾಲಿ. ಮಾಧ್ಯಮಗಳ ಕೆಮೆರಾ ಕಂಡರಂತೂ ಅವರು ತಾವೇ ಗಣ್ಯರು ಅನ್ನುವ ಹಾಗೆ ವರ್ತಿಸುತ್ತಾರೆ. ಸಿದ್ದರಾಮಯ್ಯ ಮತ್ತು ಬೇರೆ ಜನಪ್ರಿಯ ನಾಯಕರಿಗೆ ಇಂಥದೆಲ್ಲ ಅಭ್ಯಾಸವಾಗಿರುತ್ತದೆ ಅನಿಸುತ್ತದೆ.

ಇದನ್ನೂ ಓದಿ:   ಸಿದ್ದರಾಮಯ್ಯನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆಗೆ ಬಂದವರು ಸಿದ್ದರಾಮಯ್ಯನವರ ಜೊತೆ ಕಂಡರು!

Published on: Mar 25, 2022 11:25 PM