ಸವದತ್ತಿ ಎಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಜೊತೆ ಭಕ್ತರ ಹರಕೆ ಪತ್ರಗಳು!
ಕಳೆದ 45 ದಿನಗಳಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿರುವ ಮೊತ್ತ ರೂ. 1,30,96,190. ಇದಲ್ಲದೆ ಭಕ್ತರು ಹಾಕಿರುವ ಸುಮಾರು 12.45 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಮತ್ತು 3,08,895 ರೂ. ಬೆಲೆ ಬಾಳುವ ಬೆಳ್ಳಿಯ ವಸ್ತುಗಳು ಹುಂಡಿಯಲ್ಲಿ ಸಿಕ್ಕಿವೆ.
ಬೆಳಗಾವಿಯ ಸವದತ್ತಿ ಎಲ್ಲಮ್ಮನಿಗೆ (Savadatti Yellamma) ಬೇರೆ ದೇಶಗಳಲ್ಲೂ ಭಕ್ತರಿದ್ದಾರೆ, ವಿದೇಶಗಳಲ್ಲಿರುವ ಭಾರತೀಯರಲ್ಲ ಮಾರಾಯ್ರೇ, ಅಪ್ಪಟ ವಿದೇಶಿಯರು (foreigners). ನಿಮಗೆ ನಂಬಿಕೆ ಬರುತ್ತಿಲ್ಲ ಅಂತಾದರೆ, ಎಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿರುವ ಭಾರತೀಯ ಕರೆನ್ಸಿಯ ಜೊತೆ ಐದಾರು ಹೊರದದೇಶಗಳ ಕರೆನ್ಸಿಯನ್ನು (currency) ಒಮ್ಮೆ ಗಮನಿಸಿ. ಕಳೆದ ಒಂದೂವರೆ ತಿಂಗಳಲ್ಲಿ ಸವದತ್ತಿ ಎಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾಗಿರುವ ಭಕ್ತರ ಕಾಣಿಕೆಗಳನ್ನು ಗುರುವಾರ ಹೊರತೆಗೆದು ಎಣಿಸಲಾಯಿತು. ದೇವಸ್ಥಾನ ಹಾಲ್ ಅನ್ನು ನೋಡಿ ಮಾರಾಯ್ರೇ, ಎಲ್ಲಿ ನೋಡಿದರೂ ದುಡ್ಡು ಮತ್ತು ಅದನ್ನು ಎಣಿಸುವ ಕಾರ್ಯದಲ್ಲಿ ಮಗ್ನರಾಗಿರುವ ಹಲವಾರು ಮಂದಿ. ಕೋವಿಡ್ ಪಿಡುಗಿನಿಂದಾಗಿ ಹೇರಿದ್ದ ನಿರ್ಬಂಧಗಳೆಲ್ಲ ಈಗ ಸಡಿಲಗೊಂಡಿವೆ. ಜನ ದೇವಸ್ಥಾನಗಳಿಗೆ ನಿರ್ಭೀತಿಯಿಂದ ಭೇಟಿ ನೀಡುತ್ತಿದ್ದಾರೆ.
ಅಂದಹಾಗೆ, ಕಳೆದ 45 ದಿನಗಳಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿರುವ ಮೊತ್ತ ರೂ. 1,30,96,190. ಇದಲ್ಲದೆ ಭಕ್ತರು ಹಾಕಿರುವ ಸುಮಾರು 12.45 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಮತ್ತು 3,08,895 ರೂ. ಬೆಲೆ ಬಾಳುವ ಬೆಳ್ಳಿಯ ವಸ್ತುಗಳು ಹುಂಡಿಯಲ್ಲಿ ಸಿಕ್ಕಿವೆ.
ಅದೇನೋ ಸರಿ, ಹುಂಡಿಯಲ್ಲಿ ಭಕ್ತರು ಬರೆದಿರುವ ಕೆಲ ಹರಕೆ ಪತ್ರಗಳು ಸಹ ಸವದತ್ತಿ ಎಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ದೊರಕಿವೆ. ಒಬ್ಬ ವಿದ್ಯಾರ್ಥಿ ಭಕ್ತ ಪರೀಕ್ಷೆಯಲ್ಲಿ ಪಾಸು ಮಾಡಿಸು ತಾಯಿ ಅಂತ ಎಲ್ಲಮ್ಮನನ್ನು ಕೇಳಿದ್ದರೆ ಮತ್ಯಾರೋ ಆಸ್ತಿ ತಗಾದೆಯನ್ನು ಬಗೆಹರಿಸು ಅಂತ ಕೇಳಿದ್ದಾರೆ.
ಇದನ್ನೂ ಓದಿ: Viral Video: ಮದುವೆ ದಿನ ವಧು-ವರರ ಜೊತೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿದ ಮುದ್ದು ನಾಯಿ; ವಿಡಿಯೋ ವೈರಲ್