Loading video

ರಾಯಚೂರು: ಪೂಜೆ ವೇಳೆ ಪ್ರಜ್ವಲಿಸಿದ ಜ್ಯೋತಿ, ಅಯ್ಯಪ್ಪ ಸ್ವಾಮಿಯ ಪವಾಡ ಎನ್ನುತ್ತಿರುವ ಮಾಲಾಧಾರಿಗಳು

| Updated By: Rakesh Nayak Manchi

Updated on: Dec 17, 2023 | 1:01 PM

ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಏಕಾಏಕಿಯಾಗಿ ಜ್ಯೋತಿ ಪ್ರಜ್ವಲಿಸಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದಿದೆ. ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿದ್ದ ಹೋಮದ ವೇಳೆ ಏಕಾಏಕಿಯಾಗಿ ಅಗ್ನಿ ಪ್ರಜ್ವಲಿಸಿದೆ. ಇದು ಅಯ್ಯಪ್ಪ ಸ್ವಾಮಿಯ ಪವಾಡ ಎಂದು ಮಾಲಾಧಾರಿಗಳು ಹೇಳುತ್ತಿದ್ದಾರೆ.

ರಾಯಚೂರು, ಡಿ.17: ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪವಾಡ ನಡೆದಿದೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ರಾಯಚೂರು (Raichur) ಜಿಲ್ಲೆ ಸಿಂಧನೂರು ನಗರದಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಗುರುಸ್ವಾಮಿ ಶ್ರೀಹರಿರಾಜು ಸ್ವಾಮಿ ನೇತೃತ್ವದಲ್ಲಿ ನೂರಾರು ಅಯ್ಯಪ್ಪ ಮಾಲಾಧಾರಿಗಳು ಪೂಜೆ ನಡೆಸುತ್ತಿದ್ದರು. ಅದರಂತೆ ಹೋಮ ಮಾಡುತ್ತಿದ್ದ ವೇಳೆ ಏಕಾಏಕಿಯಾಗಿ ಅಗ್ನಿ ಪ್ರಜ್ವಲಿಸಿದೆ. ಇದು ಅಯ್ಯಪ್ಪ ಸ್ವಾಮಿಯ ಪವಾಡ ಎಂದು ಮಾಲಾಧಾರಿಗಳು ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ