Loading video

ಹಳ್ಳಿ ಬಾಹುಬಲಿಯ ಸಾಹಸ: ಏಕಾಂಗಿಯಾಗಿ 30 ಟನ್ ಕಬ್ಬು ಲೋಡ್ ಮಾಡಿದ ಯುವಕ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 05, 2025 | 3:56 PM

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದ 22 ವರ್ಷದ ಯುವಕ ಏಕಾಂಗಿಯಾಗಿ 30 ಟನ್ ಕಬ್ಬನ್ನು 6.5 ಗಂಟೆಗಳಲ್ಲಿ ಟ್ರ್ಯಾಕ್ಟರ್‌ಗೆ ಲೋಡ್ ಮಾಡಿ ದಾಖಲೆ ನಿರ್ಮಿಸಿದ್ದಾನೆ. ಇದು ಸಾಮಾನ್ಯವಾಗಿ 20 ಜನರ ತಂಡ ಮಾಡುವ ಕೆಲಸ. ಆದರೆ ಆತ ಏಕಾಂಗಿಯಾಗಿ ಮಾಡಿದ್ದಾರೆ. ಅವನ ಸಾಧನೆಗೆ ಸ್ಥಳೀಯರು ಹಾರ ಹಾಕಿ ಸನ್ಮಾನಿಸಿದ್ದಾರೆ.

ಬಾಗಲಕೋಟೆ, ಮಾರ್ಚ್​ 05: ಜಿಲ್ಲೆಯ ಮುಧೋಳ ತಾಲ್ಲೂಕಿನ ಬುದ್ನಿ ಪಿಎಮ್ ಗ್ರಾಮದ 22 ವರ್ಷದ ವೀರೇಶ್ ಮಾದರ ಎಂಬ ಯುವಕ 6.5 ಗಂಟೆಯಲ್ಲಿ 30 ಟನ್ ಕಬ್ಬನ್ನು (Sugarcane) ಟ್ರ್ಯಾಕ್ಟರ್​​ಗೆ ಲೋಡ್ ಮಾಡಿ ಸಾಹಸ ಮಾಡಿದ್ದಾರೆ. ಹಳ್ಳಿ ಬಾಹುಬಲಿಯ ಭರ್ಜರಿ ಸಾಹಸಕ್ಕೆ ಜನರು ಫಿದಾ ಆಗಿದ್ದಾರೆ. ಬಾಬು ಪಾಟೀಲ್​ ಎಂಬುವರ ಹೊಲದಲ್ಲಿನ ಕಬ್ಬನ್ನು ಏಕಾಂಗಿಯಾಗಿ ಟ್ರ್ಯಾಕ್ಟರ್​​ಗೆ ಲೋಡ್ ಮಾಡಿದ್ದಾರೆ. ಹಳ್ಳಿ ಹೈದನ ಚಿರತೆ ವೇಗದ ಕಾರ್ಯ ನೋಡಿ ಜನರು ರೋಮಾಂಚನಗೊಂಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.