‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಮಾಸ್ ಆಗಿ ಡೈಲಾಗ್ ಹೇಳಿದ ಬಾಲಯ್ಯ
ಬಾಲಯ್ಯ ನಟನೆಯ ಸಿನಿಮಾ ‘ಅಖಂಡ 2’ ರಿಲೀಸ್ ಆಗಿದೆ. ಈ ಸಿನಿಮಾದ ಡೈಲಾಗ್ಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ. ಈಗ ಈ ಚಿತ್ರದ ಬಗ್ಗೆ ಒಂದು ಅಚ್ಚರಿಯ ವಿಷಯ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ಕನ್ನಡದ ಡೈಲಾಗ್ ಇದೆ ಎಂದರೆ ನೀವು ನಂಬಲೇಬೇಕು. ಆ ಡೈಲಾಗ್ ವಿಡಿಯೋ ವೈರಲ್ ಆಗಿದೆ.
‘ಅಖಂಡ 2’ ಚಿತ್ರ ಇಂದು (ಡಿಸೆಂಬರ್ 12) ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುವ ನಿರೀಕ್ಷೆ ಇದೆ. ಬಾಲಯ್ಯ ನಟನೆಯ ಚಿತ್ರ ಇದಾಗಿದೆ. ಈ ಸಿನಿಮಾದ ಫೈಟ್ನಲ್ಲಿ ‘ಕರ್ನಾಟಕ ನನ್ನ ಸಹೋದರನ ಮನೆ’ ಎಂದು ಡೈಲಾಗ್ ಹೇಳುತ್ತಾರೆ. ಅಷ್ಟೇ ಅಲ್ಲ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ’ ಎಂದು ಬಾಲಯ್ಯ ಡೈಲಾಗ್ ಹೇಳುತ್ತಾರೆ. ಇದಕ್ಕೆ ಸಿಳ್ಳೆ ಬಿದ್ದಿದೆ. ಆ ಸಂದರ್ಭದ ವಿಡಿಯೋ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 12, 2025 11:00 AM