ಬಳ್ಳಾರಿಯಲ್ಲಿ ಪಿಎಫ್ಐ ಕಾರ್ಯಕರ್ತರು ಯುವಕನೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದರೆ ಪೊಲೀಸರು ಮೂಕಪ್ರೇಕ್ಷಕರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2022 | 11:45 AM

ಪೊಲೀಸರು ಅರುಣ್ ನನ್ನು ಅಲ್ಲಿಂದ ಕರೆದುಕೊಂಡು ಹೋಗುವಾಗಲೂ ಹಲ್ಲೆ ಮುಂದುವರಿಯುತ್ತದೆ. ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸುವುದು ಹೇವರಿಕೆ ಹುಟ್ಟಿಸುತ್ತದೆ ಮಾರಾಯ್ರೇ.

ಬಳ್ಳಾರಿ: ಈ ವಿಡಿಯೋ ನೋಡಿದರೆ ಬಳ್ಳಾರಿಗೆ ಖಡಕ್ ಪೊಲೀಸದ ಅಧಿಕಾರಿಗಳ ಅವಶ್ಯಕತೆಯಿದೆ ಅನಿಸುತ್ತದೆ ಮಾರಾಯ್ರೇ. ಗುರುವಾರದಂದು ಪಿಎಫ್ಐ ಮುಖಂಡರನ್ನು (PFI leaders) ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ರಾಜ್ಯದ ಕೆಲಭಾಗಗಳಲ್ಲಿ ಸಂಘಟನೆ ಬಗ್ಗೆ ಸಹಾನುಭೂತಿ ಇರುವ ಜನ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಬಳ್ಳಾರಿ (Ballari) ನಗರದ ಒಂದು ಭಾಗದಲ್ಲಿ ಬೆರಳೆಣಿಕೆಯಷ್ಟು ಜನ ಪ್ರತಿಭಟನೆ ನಡೆಸುತ್ತಿರುವುದು ಮತ್ತು ಪೊಲೀಸರು ಅವರನ್ನು ಓಲೈಸುತ್ತಿರುವುದು ವಿಡಿಯೋದಲ್ಲಿ ಕಾಣುತ್ತದೆ. ಏತನ್ಮಧ್ಯೆ ಕೆಲ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಅರುಣ್ ರೆಡ್ಡಿ (Arun Reddy) ಹೆಸರಿನ ಯುವಕನ ಮೇಲೆ ಹಲ್ಲೆ ನಡೆಸಿ ಅವನನ್ನು ಮನಬಂದಂತೆ ಥಳಿಸುತ್ತಾರೆ. ಪೊಲೀಸರು ಅರುಣ್ ನನ್ನು ಅಲ್ಲಿಂದ ಕರೆದುಕೊಂಡು ಹೋಗುವಾಗಲೂ ಹಲ್ಲೆ ಮುಂದುವರಿಯುತ್ತದೆ. ಪೊಲೀಸರು ಮೂಕಪ್ರೇಕ್ಷಕರಂತೆ ವರ್ತಿಸುವುದು ಹೇವರಿಕೆ ಹುಟ್ಟಿಸುತ್ತದೆ ಮಾರಾಯ್ರೇ.