ಕರ್ನಾಟಕದಲ್ಲಿ ಚುನಾವಣಾ ಭ್ರಷ್ಟಾಚಾರ ಆರಂಭಿಸಿದ್ದು ಬಳ್ಳಾರಿ ರೆಡ್ಡಿಗಳು: ಜೆಟಿ ಪಾಟೀಲ್, ಬೀಳಗಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2023 | 11:40 AM

ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಗಳಾಗಿ ಕೆಲಸ ಮಾಡುತ್ತಿದ್ದವರು, ವೋಟು ತಮಗೆ ಹಾಕಿದರೆ ಅವರು (ರೆಡ್ಡಿಗಳು) ಮೊಬೈಲ್ ಫೋನ್ ಮತ್ತು ಹಣ ಕೊಡುವುದಾಗಿ ಹೇಳಿದ್ದಾರೆ, ನೀವೇನು ಕೊಡ್ತೀರಿ ಅಂತ ಅವರು ನಮ್ಮನ್ನು ಕೇಳಿದರು ಎಂದು ಪಾಟೀಲ್ ಹೇಳಿದರು.

ಬಾಗಲಕೋಟೆ: ಚುನಾವಣೆಯಲ್ಲಿ ಭ್ರಷ್ಟಾಚಾರವನ್ನು ಹುಟ್ಟುಹಾಕಿದವರು ಬಳ್ಳಾರಿಯ ರೆಡ್ಡಿಗಳು (Reddy brothers of Ballari), ಅವರಿಂದಾಗೇ ಪ್ರಜಾಪ್ರಭುತ್ವದ ಬಹು ಮುಖ್ಯ ಅಂಗವಾಗಿರುವ ಚುನಾವಣೆಗೆ ಭ್ರಷ್ಟಾಚಾರದ (corruption) ಕಳಂಕ ಸುತ್ತಿಕೊಂಡಿದೆ ಎಂದು ಬೀಳಗಿ ಶಾಸಕ ಜೆಟಿ ಪಾಟೀಲ್ (JT Patil) ಹೇಳಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಬೀಳಗಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಪಾಟೀಲ್, ಚುನಾವಣಾ ಪ್ರಚಾರಕ್ಕೆಂದು ಕೆಎಂಸಿ ಕ್ಯಾಂಪಸ್ ಹೋದಾಗ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್ ಗಳಾಗಿ ಕೆಲಸ ಮಾಡುತ್ತಿದ್ದವರು, ವೋಟು ತಮಗೆ ಹಾಕಿದರೆ ಅವರು (ರೆಡ್ಡಿಗಳು) ಮೊಬೈಲ್ ಫೋನ್ ಮತ್ತು ಹಣ ಕೊಡುವುದಾಗಿ ಹೇಳಿದ್ದಾರೆ, ನೀವೇನು ಕೊಡ್ತೀರಿ ಅಂತ ಅವರು ನಮ್ಮನ್ನು ಕೇಳಿದರು ಎಂದು ಹೇಳಿದರು. ಹಾಗೆ ವೋಟು ಪಡೆದು ಶಾಸಕರಾಗಿ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದರಲ್ಲಿ ಯಾವ ಪುರುಷಾರ್ಥ ಅಡಗಿದೆ ಎಂದು ಹೇಳಿದ ಕಾಂಗ್ರೆಸ್ ಶಾಸಕ, ರಾಜಕಾರಣದ ಜೊತೆ ರಾಜಕಾರಣಿಗಳು ಕೂಡ ಕೆಟ್ಟಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.